'ಛಾಶ್': ನಿದ್ರಾಹೀನತೆ ಇದ್ದವರು ಕುಡಿಯಲೇಬೇಕಾದ ಪಾನೀಯ ಇದು - ಬೇಸಿಗೆ ಪಾನೀಯ
ಛಾಶ್ ಅಥವಾ ಮಸಾಲ ಮಜ್ಜಿಗೆ, ಇದು ಬೇಸಿಗೆಯಲ್ಲಿ ಕುಡಿಯುವ ಸಾಮಾನ್ಯ ಪಾನೀಯಗಳಲ್ಲಿ ಒಂದಾಗಿದೆ. ಇದು ನಿಮ್ಮ ಬಾಯಾರಿಕೆಯನ್ನು ಮಾತ್ರ ನೀಗಿಸುವುದಿಲ್ಲ. ಬದಲಾಗಿ ಹಸಿವನ್ನು ಹೆಚ್ಚಿಸುತ್ತದೆ. ಇದನ್ನು ಕುಡಿದರೆ ನಿದ್ರೆ ಕೂಡ ಹೆಚ್ಚು ಬರುವುದರಿಂದ ನಿದ್ರೆಯ ಕೊರತೆ ಇರುವವರು ಹೆಚ್ಚು ಬಳಕೆ ಮಾಡಿದರೆ ಒಳಿತು. ಬಹುತೇಕ ಎಲ್ಲ ಭಾರತೀಯ ಮನೆಗಳಲ್ಲಿ ಬೇಸಿಗೆಯಲ್ಲಿ ಇದನ್ನು ಬಳಸುತ್ತಾರೆ. ಛಾಶ್ ತಯಾರಿಸುವ ಬೇರೆ ಪಾಕವಿಧಾನ ನಿಮಗೆ ತಿಳಿದಿದ್ದರೆ ನಮ್ಮೊಂದಿಗೆ ಹಂಚಿಕೊಳ್ಳಿ.