ಕುಡಿದು ಅಡ್ಡಾದಿಡ್ಡಿ ಕಾರು ಚಾಲನೆ: ಪ್ರಾಣಾಪಾಯದಿಂದ ಪಾರಾದ ಯುವತಿ - ಕುಡಿದು ಅಡ್ಡಾದಿಡ್ಡಿ ಕಾರು ಚಾಲನೆ
ಕಾಂಚೀಪುರಂ(ತಮಿಳುನಾಡು): ಪಾನಮತ್ತ ವ್ಯಕ್ತಿಯೋರ್ವ ಅಡ್ಡಾದಿಡ್ಡಿ ಕಾರು ಚಲಾಯಿಸಿ ವೈದ್ಯಕೀಯ ಕಾಲೇಜು ವಿದ್ಯಾರ್ಥಿನಿಗೆ ಡಿಕ್ಕಿ ಹೊಡೆದಿದ್ದು, ಅದೃಷ್ಟವಶಾತ್ ಯುವತಿ ಪ್ರಾಣಣಾಪಾಯದಿಂದ ಪಾರಾಗಿದ್ದಾಳೆ. ಅಪಘಾತದ ದೃಶ್ಯವನ್ನು ಸೆರೆಹಿಡಿಯಲಾಗಿದ್ದು, ಕಾರು ರಸ್ತೆಯ ಮೇಲೆ ಇರಿಸಿದ ಬ್ಯಾರಿಕೇಡ್ಗೆ ಡಿಕ್ಕಿ ಹೊಡೆದು ನಂತರ ಯುವತಿಗೆ ಗುದ್ದುತ್ತದೆ. ಸ್ಥಳೀಯರು ಯುವತಿಯ ಸಹಾಯಕ್ಕೆ ಧಾವಿಸುವುದನ್ನು ಕೂಡ ದೃಶ್ಯದಲ್ಲಿ ಕಾಣಬಹುದಾಗಿದೆ.