ವಿದ್ಯಾರ್ಥಿನಿಗೆ ಹಾವು ಕಚ್ಚಿದ್ರೂ ಆಸ್ಪತ್ರೆಗೆ ಸೇರಿಸದೆ ಪಾಠ ಮಾಡಿದ ಮೇಷ್ಟ್ರು... ಕೊನೆಗೇನಾಯ್ತು? - ವಾಯನಾಡಿನಲ್ಲಿ ಹಾವು ಕಚ್ಚಿ ವಿದ್ಯಾರ್ಥಿನಿ ಸಾವು
ವಿದ್ಯಾರ್ಥಿನಿಗೆ ಹಾವು ಕಚ್ಚಿದರೂ ಆಸ್ಪತ್ರೆಗೆ ಸೇರಿಸದೆ ಪಾಠ ಮಾಡಿದ ಗುರುಗಳಿಂದಾಗಿ ಆಕೆ ಪ್ರಾಣ ಬಿಟ್ಟ ಘಟನೆ ಕೇರಳದ ವಯನಾಡಿನ ಸುಲ್ತಾಣ್ ಬತೇರಿಯಲ್ಲಿ ನಡೆದಿದೆ. ಮಗಳಿಗೆ ಹಾವು ಕಚ್ಚಿರುವ ಸುದ್ದಿ ತಿಳಿದು ತಂದೆ ಶಾಲೆಗೆ ದೌಡಾಯಿಸಿ ಸ್ಥಳೀಯ ಆಸ್ಪತ್ರೆಗೆ ಕೊಂಡೊಯ್ದಿದ್ದರು. ಅಲ್ಲಿನ ವೈದ್ಯರು ಕೋಯಿಕ್ಕೋಡ್ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದ್ದಾರೆ. ಆದ್ರೆ ಬಾಲಕಿ ಅಷ್ಟೋತ್ತಿಗಾಗಲೇ ಸಾವನ್ನಪ್ಪಿದ್ದಳು. ಬಾಲಕಿ ಮೃತಪಟ್ಟಿರುವ ಘಟನೆ ತೀವ್ರವಾಗಿ ಪರಿಗಣಿಸಿದ ಕೇರಳ ಶಿಕ್ಷಣ ಸಚಿವ ರವೀಂದ್ರನಾಥ್ ಸ್ಪಂದಿಸಿದ್ದಾರೆ. ಈ ಘಟನೆಯ ಪೂರ್ತಿ ವಿವರ ಸಲ್ಲಿಸುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ. ಕೇರಳ ಶಿಕ್ಷಣ ವಿಭಾಗವೂ ಸಹ ಘಟನೆಯ ವಿವರ ಸಲ್ಲಿಸುವಂತೆ ತಿಳಿಸಿದೆ. ಬಾಲಕಿ ಸಾವಿಗೆ ಕಾರಣವಾದವರ ಮೇಲೆ ಕಠಿಣ ಕ್ರಮ ಕೈಗೊಳ್ಳಲಾಗುವೆಂದು ವಯನಾಡು ಜಿಲ್ಲಾಧಿಕಾರಿ ಅದೀಲಾ ಅಬ್ದುಲ್ಲಾ ಹೇಳಿದ್ದಾರೆ.