ಬೀದಿ ನಾಯಿಗೂ ಬ್ರೈನ್ ಟ್ಯೂಮರ್; ಜೀವ ಉಳಿಸಲು ಇಂದು ನಡೆಯಲಿದೆ ಆಪರೇಷನ್! - ಸ್ಪೀಕ್ ಫಾರ್ ಅನಿಮಲ್ಸ್
ಭುವನೇಶ್ವರ (ಒಡಿಶಾ): 'ಸ್ಪೀಕ್ ಫಾರ್ ಅನಿಮಲ್ಸ್' ಎಂಬ ಸಂಘಟನೆಯು ಬೀದಿ ನಾಯಿಯೊಂದನ್ನು ರಕ್ಷಿಸಿದ್ದು, ಮೆದುಳಿನ ಸಿ.ಟಿ. ಸ್ಕ್ಯಾನಿಂಗ್ಗೆ ಕಳುಹಿಸಲಾಗಿತ್ತು. ಪರೀಕ್ಷೆಯಲ್ಲಿ ಶ್ವಾನಕ್ಕೆ ಬ್ರೈನ್ ಟ್ಯೂಮರ್ ಕಾಯಿಲೆ ಇರುವುದು ತಿಳಿದು ಬಂದಿದೆ. ಅನಾರೋಗ್ಯದಿಂದ ಬಳಲುತ್ತಿರುವ ಶ್ವಾನದ ಜೀವ ಉಳಿಸಲು ಶೀಘ್ರವೇ ಆಪರೇಷನ್ ಮಾಡಬೇಕೆಂದು ಪಶು ವೈದ್ಯರು ಸಲಹೆ ನೀಡಿದ್ದಾರೆ. ಅದರಂತೆ ಇಂದು ಮಾನವ ಮತ್ತು ಪಶು ವೈದ್ಯರ ಸಹಯೋಗದೊಂದಿಗೆ ಆಪರೇಷನ್ ನಡೆಯಲಿದ್ದು, ಈ ಪ್ರಯತ್ನ ಇದೇ ಮೊದಲಾಗಿದೆ.