ಚುನಾವಣಾ ಪ್ರಚಾರ ಭಾಷಣ ವೇಳೆ ಕುಸಿದ ವೇದಿಕೆ:ಕೆಳಕ್ಕೆ ಬಿದ್ದ ಪಪ್ಪು ಯಾದವ್ - ಮೀನಾಪುರ ವಿಧಾನಸಭಾ ಕ್ಷೇತ್ರ
ಬಿಹಾರದ ಎರಡನೇ ಹಂತದ ಚುನಾವಣೆಗೆ ಬಿರುಸಿನ ಪ್ರಚಾರ ನಡೆಯುತ್ತಿದ್ದು, ಇಂದು ಜನ್ ಅಧಿಕಾರಿ ಪಕ್ಷದ ಮುಖಂಡ ಪಪ್ಪು ಯಾದವ್ ಚುನಾವಣಾ ಸಭೆ ಉದ್ದೇಶಿಸಿ ಮಾತನಾಡುವಾಗ ವೇದಿಕೆ ಕುಸಿದು ಬಿದ್ದಿದೆ. ವೇದಿಕೆ ಮೇಲೆ ಜಾಗವೇ ಇಲ್ಲದಷ್ಟು ಜನ ನಿಂತಿದ್ದ ಪರಿಣಾಮ ಟೆಂಟ್ ಏಕಾಏಕಿ ಕುಸಿದಿದೆ. ತಮ್ಮ ಪಕ್ಷದ ಪ್ರಚಾರಕ್ಕಾಗಿ ಇಲ್ಲಿನ ಮುಜಾಫರ್ಫುರ್ನ ಮೀನಾಪುರ ವಿಧಾನಸಭಾ ಕ್ಷೇತ್ರಕ್ಕೆ ಆಗಮಿಸಿ ಭಾಷಣ ಮಾಡುವ ವೇಳೆ ಅವಘಡ ಸಂಭವಿಸಿದೆ.