ಶ್ರೀನಗರ: ಮಹಿಳೆಯರ ಸಬಲೀಕರಣ ಜಾಗೃತಿಗೆ ಮ್ಯಾರಥಾನ್ - ಶ್ರೀನಗರದಲ್ಲಿ ಮ್ಯಾರಥಾನ್ ಆಯೋಜನೆ
ಶ್ರೀನಗರ: ಕಣಿವೆಯಲ್ಲಿ ಮಹಿಳಾ ಸಬಲೀಕರಣಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಹಾಗೂ ಮಾದಕವಸ್ತು ಸೇವನೆಯ ವಿರುದ್ಧ ಜಾಗೃತಿ ಮೂಡಿಸುವ ಸಲುವಾಗಿ ಸರ್ಕಾರೇತರ ಸಂಸ್ಥೆಯಾದ ವೈಟ್ ಗ್ಲೋಬ್, ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮತ್ತು ನಿಜಾಮಿಯಾ ಎಜುಕೇಶನ್ ಗ್ರೂಪ್ ದೆಹಲಿ ಇವರ ಸಹಹೋಗದೊಂದಿಗೆ ಶ್ರೀನಗರದಲ್ಲಿ ಮಹಿಳಾ ಮ್ಯಾರಥಾನ್ ಆಯೋಜಿಸಲಾಗಿತ್ತು. ಮ್ಯಾರಥಾನ್‌ನಲ್ಲಿ 600 ಕ್ಕೂ ಹೆಚ್ಚು ಮಹಿಳೆಯರು ಹಾಗೂ ಬಾಲಕಿಯರು ಭಾಗವಹಿಸಿದ್ದರು.