'ಹೆಚ್ಚು ಹೂಡಿಕೆ ಮಾಡಿ'- ಆರ್ಥಿಕ ಪುನಶ್ಚೇತನಕ್ಕೆ ಇದೇ ಸೂಕ್ತ ಮಾರ್ಗ ಎಂದ ಪ್ರೊ.ಭಾನುಮೂರ್ತಿ - FRBM
ಭಾರತವು ಅತ್ಯಂತ ಗೊಂದಲದ ವರ್ಷವನ್ನು ದಾಟುತ್ತಿದ್ದು, ದೇಶದ ಆರ್ಥಿಕತೆ ದುಸ್ಥಿತಿಯಲ್ಲಿದೆ. ಇಂತಹ ಸಮಯದಲ್ಲಿ ಹೂಡಿಕೆ ಹೆಚ್ಚು ಮಾಡಬೇಕು. ಹಣಕಾಸಿನ ಜವಾಬ್ದಾರಿ ಮತ್ತು ಬಜೆಟ್ ನಿರ್ವಹಣಾ ಕಾಯ್ದೆ (FRBM) ಅಡಿಯಲ್ಲಿ ಹಣಕಾಸಿನ ಕೊರತೆ ನೀಗಿಸಲು ಯೋಜನೆ ರೂಪಿಸುವುದರಿಂದ ಕೋವಿಡ್ನಿಂದ ಉಂಟಾದ ಆರ್ಥಿಕ ಪರಿಸ್ಥಿತಿ ಪುನಶ್ಚೇತನವಾಗುದಿಲ್ಲ. ಒಂದು ವರ್ಷದವರೆಗೆ ಎಫ್‌ಆರ್‌ಬಿಎಂ ಮಾರ್ಗಸೂಚಿಯನ್ನು ವಿತ್ತ ಸಚಿವರು ಮರೆತು ಬಿಡುವುದು ಒಳಿತು ಎಂದು ಈಟಿವಿ ಭಾರತದೊಂದಿಗಿನ ವಿಶೇಷ ಸಂದರ್ಶನದಲ್ಲಿ ಖ್ಯಾತ ಅರ್ಥಶಾಸ್ತ್ರಜ್ಞ ಮತ್ತು ಬೆಂಗಳೂರಿನ BASE (ಡಾ. ಬಿ ಆರ್ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್) ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎನ್.ಆರ್.ಭಾನುಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.