ದೆಹಲಿ ಹಿಂಸಾಚಾರ: ಕೇಂದ್ರದ ವಿರುದ್ಧ ಗುಡುಗಿದ ಸೋನಿಯಾ, ಮನಮೋಹನ್ ಸಿಂಗ್ - ರಾಷ್ಟ್ರಪತಿ ಭೇಟಿ ಮಾಡಿದ ಕಾಂಗ್ರೆಸ್ ನಿಯೋಗ
ದೆಹಲಿ ಹಿಂಸಾಚಾರ ಖಂಡಿಸಿ ಸೋನಿಯಾ ಗಾಂಧಿ ನೇತೃತ್ವದ ಕಾಂಗ್ರೆಸ್ ನಿಯೋಗ ರಾಷ್ಟ್ರಭವನಕ್ಕೆ ತೆರಳಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ಗೆ ಮನವಿ ಸಲ್ಲಿಸಿದೆ. ಈ ವೇಳೆ ಮಾತನಾಡಿದ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್, ದೆಹಲಿಯಲ್ಲಿ ಕಳೆದ 4 ದಿನಗಳಿಂದ ಆಗಿರುವ ಗಲಭೆ ಅತ್ಯಂತ ಕಳವಳಕಾರಿ. ಇದು ಕೇಂದ್ರ ಸರ್ಕಾರದ ವೈಫಲ್ಯಕ್ಕೆ ಹಿಡಿದ ಕೈಗನ್ನಡಿ ಎಂದು ಕೇಂದ್ರ ಸರ್ಕಾರವನ್ನು ದೂರಿದರು. ಇನ್ನೊಂದೆಡೆ ಹಿಂಸಾಚಾರ ನಿಯಂತ್ರಿಸುವಲ್ಲಿ ಗೃಹ ಸಚಿವ ಅಮಿತ್ ಶಾ ವಿಫಲರಾಗಿದ್ದಾರೆ. ಸಚಿವ ಸ್ಥಾನದಿಂದ ಅವರನ್ನು ಅಮಾನತುಗೊಳಿಸಿ ಎಂದು ರಾಷ್ಟ್ರಪತಿ ಕೋವಿಂದ್ಗೆ ಸಲ್ಲಿಸಿದ ಪತ್ರದಲ್ಲಿ ಕಾಂಗ್ರೆಸ್ ನಿಯೋಗ ಮನವಿ ಸಲ್ಲಿಸಿದೆ.