ತಳ್ಳುವ ಗಾಡಿಯಲ್ಲಿ ತನ್ನ ತಂದೆಯನ್ನು ಆಸ್ಪತ್ರೆಗೆ ಕರೆದೊಯ್ದ ಪುತ್ರ: ವಿಡಿಯೋ ವೈರಲ್ - Rajasthan news
ಭಿನ್ಮಲ್ (ಜಲೋರ್): ಬಾಗೋಡಾದಲ್ಲಿ ಸ್ಥಳೀಯ ಆಡಳಿತ ಮುಜುಗರಕ್ಕೀಡಾಗುವಂತಹ ಘಟನೆಯ ವಿಡಿಯೋ ವೈರಲ್ ಆಗಿದೆ. ಹೌದು, ವ್ಯಕ್ತಿಯೋರ್ವನಿಗೆ ತನ್ನ ತಂದೆಯನ್ನು ಆಸ್ಪತ್ರೆಗೆ ಕರೆದೊಯ್ಯಲು ಆಂಬ್ಯುಲೆನ್ಸ್ ಲಭ್ಯವಾಗದ ಕಾರಣ ಸ್ವತಃ ತಳ್ಳುವ ಬಂಡಿಯಲ್ಲಿ ತನ್ನ ತಂದೆಯನ್ನು ಆಸ್ಪತ್ರೆಗೆ ಕರೆದೊಯ್ಯುವ ದೃಶ್ಯ ವೈರಲ್ ಆಗಿದೆ. ಸ್ಥಳೀಯ ಆಸ್ಪತ್ರೆ ಆಂಬುಲೆನ್ಸ್ ಒದಗಿಸಿಲ್ಲ ಎಂದು ಕುಟುಂಬದ ಸದಸ್ಯರು ಆರೋಪಿಸಿದ್ದಾರೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಆಸ್ಪತ್ರೆ ಸಿಬ್ಬಂದಿ ಎಚ್ಚೆತ್ತುಕೊಂಡಿದ್ದಾರೆ.