ಕೇದಾರನಾಥದಲ್ಲಿ ಮುಂದುವರಿದ ಹಿಮಪಾತ.. ತಾಪಮಾನದಲ್ಲಿ ತೀವ್ರ ಇಳಿಕೆ - ಹಿಮಪಾತ
ಮೇ ತಿಂಗಳಲ್ಲಿಯೂ ಉತ್ತರಾಖಂಡ್ನ ಕೇದಾರನಾಥದಲ್ಲಿ ಹಿಮಪಾತ ಮುಂದುವರಿದಿದೆ. ಹೀಗಾಗಿ ಕೇದರನಾಥ ಉಷ್ಣತೆಯಲ್ಲಿ ತೀವ್ರ ಕಡಿಮೆಯಾಗಿದೆ. ಈಗಾಗಲೇ ಐದು ಅಡಿಗಳಿಗಿಂತ ಹೆಚ್ಚು ಹಿಮವು ಹೆಪ್ಪುಗಟ್ಟಿದೆ. ಇದರಿಂದ ಜನ ಶೀತದಲ್ಲಿ ವಾಸಿಸುವಂತಾಗಿದೆ. ಈ ಹಿಮಪಾತದ ವಿಹಂಗಮ ನೋಟವನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದೆ. ಲಾಕ್ಡೌನ್ ಹಿನ್ನೆಲೆ ಕೇದಾರನಾಥಕ್ಕೆ ಭಕ್ತರ ಪ್ರವೇಶ ನಿಷೇಧಿಸಲಾಗಿದೆ.