ಮಲಗಿದ್ದ ವೇಳೆ ಒಂದೇ ಕುಟುಂಬದ ಮೂವರಿಗೆ ಕಚ್ಚಿದ ನಾಗಪ್ಪ! - undefined
ಮನೆಯಲ್ಲಿ ಮಲಗಿದ್ದ ವೇಳೆ ಒಂದೇ ಕುಟುಂಬದ ಮೂವರಿಗೆ ಹಾವು ಕಚ್ಚಿರುವ ಘಟನೆ ಪಕ್ಕದ ರಾಜ್ಯ ತೆಲಂಗಾಣದ ಮೆಹಬೂಬಾಬಾದ್ ಜಿಲ್ಲೆಯಲ್ಲಿ ನಡೆದಿದೆ. ಮಂಚದ ಮೇಲೆ ಮಲಗಿದ್ದ ಐವರಲ್ಲಿ ಮೂವರಿಗೆ ಹಾವು ಕಚ್ಚಿದೆ. ಈ ಘಟನೆಯಲ್ಲಿ ಒಬ್ಬ ಮೃತಪಟ್ಟಿದ್ದು, ಇನ್ನಿಬ್ಬರು ಸಾವು - ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾರೆ. ರೂಪ್ಲಾ ತಾಂಡದ ನಿವಾಸಿ ಜಾತೋಟ ರವಿ (45), ಆತನ ಹೆಂಡ್ತಿ ನೀಲಾ ಮತ್ತು ಮಕ್ಕಳಾದ ಶರಣ್, ಸಾಯಿ, ಕುಮಾರಿ ಶೈಲಜಾ ಒಂದೇ ಮಂಚದ ಮೇಲೆ ಮಲಗಿದ್ದರು. ಸುಮಾರು ರಾತ್ರಿ 9 ಗಂಟೆಗೆ ರವಿ, ನೀಲ ಮತ್ತು ಶರಣ್ಗೆ ಹಾವು ಕಚ್ಚಿದೆ. ಆದ್ರೆ, ಏನೋ ಕಡಿದಿದೆಂದುಕೊಂಡು ಸುಮ್ಮನಾಗಿದ್ದಾಗ ಹಾವು ಕಂಡಿದೆ. ಕೂಡಲೇ ಹಾವು ಕಟ್ಟಿಗೆ ಹೊಡೆದು ಸಾಯಿಸಿದ್ದಾರೆ. ಸ್ಥಳೀಯರ ಸಲಹೆ ಹಿನ್ನೆಲೆ ಮಂತ್ರವಾದಿ ಬಳಿ ತೆರಳಿ ಔಷಧ ಪಡೆದಿದ್ದಾರೆ. ಪರಿಸ್ಥಿತಿ ತೀವ್ರಗೊಂಡಾಗ ಸಂಬಂಧಿಗಳು ಆಸ್ಪತ್ರೆಗೆ ದಾಖಲಿಸಿದ್ದಾರೆ. ಚಿಕಿತ್ಸೆ ಫಲಿಸಿದೇ ರವಿ ಮೃತಪಟ್ಟಿದ್ದು, ಆತನ ಹೆಂಡ್ತಿ ನೀಲಾ ಮತ್ತು ಮಗ ಶರಣ್ ಸಾವು-ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾರೆ. ರವಿಯನ್ನು ಕಳೆದುಕೊಂಡ ಕುಟುಂಬದ ರೋಧನೆ ಮುಗಿಲು ಮುಟ್ಟಿದೆ.