ಕರ್ನಾಟಕ

karnataka

ETV Bharat / videos

ಪ್ರತಿಪಕ್ಷಗಳು ಸೋತಿವೆ, ಭಾರತ ಗೆದ್ದಿದೆ: ಕೇಂದ್ರ ಸಚಿವೆ ಸ್ಮೃತಿ ಇರಾನಿ - ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ಪ್ರತಿಭಟನೆ

By

Published : Dec 9, 2020, 1:16 PM IST

ನವದೆಹಲಿ: ಕೇಂದ್ರ ಸರ್ಕಾರ ಅಂಗೀಕರಿಸಿದ ಮೂರು ಕೃಷಿ ಕಾನೂನುಗಳನ್ನು ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ದೆಹಲಿ-ಹರಿಯಾಣ ಗಡಿಯಾದ ಸಿಂಘು ಮತ್ತು ಟಿಕಾರಿಯಲ್ಲಿ ರೈತರು ಹೋರಾಟ ಮುಂದುವರೆಸಿದ್ದು ಈ ಕಾಯ್ದೆಗಳ ರದ್ದತಿಗೆ ನಿನ್ನೆ ದೇಶವ್ಯಾಪಿ ಬಂದ್‌ಗೆ ಕರೆ ನೀಡಲಾಗಿತ್ತು. ಈ ವಿಷಯವಾಗಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಈಟಿವಿ ಭಾರತದ ಜೊತೆ ಮಾತನಾಡಿದ್ದು, ಬಂದ್‌ ಮೂಲಕ ಪ್ರತಿಪಕ್ಷಗಳು ಸೋತಿವೆ, ಆದ್ರೆ ಭಾರತ ಗೆದ್ದಿದೆ ಎಂದಿದ್ದಾರೆ. ಸೆ.5 ರಿಂದ ಇಲ್ಲಿಯವರೆಗೆ 33 ಲಕ್ಷ ರೈತರು ಅವರು ಬೆಳೆದ ಬೆಳೆಗಳನ್ನು ಮಾರಾಟ ಮಾಡಿದ್ದಾರೆ. ಕನಿಷ್ಠ ಬೆಂಬಲ ಬೆಲೆ ವಿಚಾರದಲ್ಲಿ ಪ್ರತಿಪಕ್ಷಗಳು ರೈತರನ್ನು ಗೊಂದಲಕ್ಕೊಳಪಡಿಸುತ್ತಿವೆ ಎಂದರು.

ABOUT THE AUTHOR

...view details