ಐವರು ಸಹೋದ್ಯೋಗಿಗಳನ್ನು ಬಲಿ ಪಡೆದು ಆತ್ಮಹತ್ಯೆಗೆ ಶರಣಾದ ಯೋಧ! - ನಾರಾಯಣ್ಪುರ ಐಟಿಬಿಪಿ ಯೋಧರು ಹುತಾತ್ಮ
ಯೋಧನೋರ್ವ ತನ್ನ ಸಹೋದ್ಯೋಗಿಗಳ ಮೇಲೆ ಗುಂಡು ಹಾರಿಸಿ ಐವರನ್ನು ಬಲಿ ತೆಗೆದುಕೊಂಡಿರುವ ಘಟನೆ ಛತ್ತೀಸ್ಗಢ್ನ ನಾರಾಯಣ್ಪುರದಲ್ಲಿ ನಡೆದಿದೆ. ಬಳಿಕ ಆ ಯೋಧನು ಸಹ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಯೋಧ ತನ್ನ ಸಹೋದ್ಯೋಗಿಗಳ ಮೇಲೆ ಗುಂಡು ಹಾರಿಸಲು ನಿಖರ ಕಾರಣ ತಿಳಿದುಬಂದಿಲ್ಲ. ಘಟನೆಯಲ್ಲಿ ಇಬ್ಬರು ಗಾಯಗೊಂಡಿದ್ದು, ಗಾಯಾಳುಗಳನ್ನು ಹೆಲಿಕಾಪ್ಟರ್ ಮೂಲಕ ರಾಯ್ಪುರ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೃತ ಯೋಧರ ಹೆಸರು ಹೆಡ್ ಕಾನ್ಸ್ಟೇಬಲ್ಗಳಾದ ಮಹೇಂದ್ರ ಸಿಂಗ್, ದಲಿಜಿತ್ ಸಿಂಗ್, ಕಾನ್ಸ್ಟೇಬಲ್ಗಳಾದ ಸುರ್ಜಿತ್ ಸರ್ಕಾರ್, ಬಿಸ್ವರೂಪ್ ಮ್ಯಾಹ್ತೊ ಹಾಗೂ ನಿಜೀಶ್ ಎಂದು ಗುರುತಿಸಲಾಗಿದೆ. ಇನ್ನು ಆತ್ಮಹತ್ಯೆ ಮತ್ತು ದಾಳಿ ಮಾಡಿದ ಯೋಧನ ಹೆಸರು ಮಸುದುಲ್ ರೆಹ್ಮಾನ್ ಎಂದು ಗುರುತಿಸಲಾಗಿದೆ.
Last Updated : Dec 4, 2019, 7:42 PM IST