ನದಿ ನೀರಿನಲ್ಲಿ ಕೊಚ್ಚಿ ಹೋದ 35 ಎಮ್ಮೆಗಳು: ವಿಡಿಯೋ ವೈರಲ್ - ನದಿ ನೀರಿನಲ್ಲಿ ಕೊಚ್ಚಿ ಹೋದ ಎಮ್ಮೆಗಳು
ಸಿರೋಹಿ(ರಾಜಸ್ಥಾನ): ರಭಸವಾಗಿ ಹರಿಯುತ್ತಿದ್ದ ನದಿ ನೀರಿನಲ್ಲಿ ಸುಮಾರು 30ರಿಂದ 35 ಎಮ್ಮೆಗಳು ಕೊಚ್ಚಿ ಹೋದ ಘಟನೆ ಜಿಲ್ಲೆಯ ಅನಾಡರಾದ ಪೊಸಿಂಡಾ ಗ್ರಾಮದಲ್ಲಿ ನಡೆದಿದೆ. ಪೊಸಿಂಡಾ ಗ್ರಾಮದ ನಿವಾಸಿಗಳು ಎಮ್ಮೆ, ದನಗಳನ್ನು ಮೇಯಿಸಿ ವಾಪಸ್ ಕರೆ ತರುತ್ತಿದ್ದಾಗ ನದಿಯಲ್ಲಿ ಏಕಾಏಕಿ ನೀರು ಹೆಚ್ಚಾಗಿ ಎಮ್ಮೆಗಳು ಕೊಚ್ಚಿಕೊಂಡು ಹೋಗಿವೆ. ಈ ವೇಳೆ ದನಗಾಹಿಗಳು ಸಹಾಯಕ್ಕಾಗಿ ಕೂಗಿಕೊಂಡರೂ ನದಿಯಲ್ಲಿ ನೀರು ಹೆಚ್ಚಾಗಿದ್ದರಿಂದ ಯಾರೂ ಸಹಾಯಕ್ಕೆ ಹೋಗಲಿಲ್ಲ. ರಾತ್ರಿಯಿಡೀ ದನಗಾಹಿಗಳು ಎಮ್ಮೆಗಳಿಗಾಗಿ ಹಡುಕಾಡಿದ್ದಾರೆ. ಕೊನೆಗೆ ಚರಂಡಿಯೊಂದರಲ್ಲಿ ಎಮ್ಮೆಗಳು ಪತ್ತೆಯಾಗಿದ್ದು, ಎಲ್ಲಾ ಎಮ್ಮೆಗಳನ್ನು ರಕ್ಷಣೆ ಮಾಡಲಾಗಿದೆ.