ಕರ್ನಾಟಕ

karnataka

ETV Bharat / videos

'ನಮ್ಮ ಭೂಮಿ ಕಬ್ಜಾ ಮಾಡಿದ್ದೀರಿ..' ಮಹಿಳೆಯರಿಂದ ಅರಣ್ಯ ಇಲಾಖೆಯವರಿಗೆ ಚಪ್ಪಲಿ ಸೇವೆ- ವಿಡಿಯೋ - Madhya pradesh

By

Published : Jan 11, 2021, 1:30 PM IST

ಮಧ್ಯಪ್ರದೇಶದ ಸಿಯೋನಿ-ಧುಮಾ ಅರಣ್ಯ ಶ್ರೇಣಿಯಲ್ಲಿರುವ ಬುಡಕಟ್ಟು ಜನಾಂಗದ ಮಹಿಳೆಯರು ತಮ್ಮ ಭೂಮಿಯನ್ನು ಕಬ್ಜಾ ಮಾಡಿದ್ದಾರೆಂದು ಆರೋಪಿಸಿ ಅರಣ್ಯ ಇಲಾಖಾ ಕಚೇರಿಗೆ ಮುತ್ತಿಗೆ ಹಾಕಿದ್ದಾರೆ. ಈ ನಡುವೆ ಅರಣ್ಯ ಇಲಾಖೆ ಸಿಬ್ಬಂದಿ ಗ್ರಾಮೀಣ ಮಹಿಳೆಯರನ್ನು ತಡೆಯಲು ಪ್ರಯತ್ನಿಸಿದ್ದಾರೆ. ಆಕ್ರೋಶಗೊಂಡ ಮಹಿಳೆಯರು ಅವರ ಮೇಲೂ ಚಪ್ಪಲಿಯಿಂದ ಹಲ್ಲೆ ನಡೆಸಿದ್ದಾರೆ. ಮೊಹಗಾಂವ್, ಸಲೈಯಾ ಸೇರಿದಂತೆ ಸುಮಾರು 4 ಗ್ರಾಮದ ಗ್ರಾಮಸ್ಥರು ಕಳೆದ 30 ವರ್ಷಗಳಿಂದ ಇಲ್ಲಿನ ಕೊಳೆಗೇರಿ ಗುಡಿಸಲುಗಳಲ್ಲಿ ವಾಸಿಸುತ್ತಿದ್ದರು, ಅವರ ಏರಿಯಾವನ್ನು ಅರಣ್ಯ ಇಲಾಖೆ ವಶಪಡಿಸಿಕೊಳ್ಳುತ್ತದೆ ಎಂಬ ಕಾರಣಕ್ಕೆ ಇಲಾಖೆ ಮುಂದೆ ಬಂದು ಘೇರಾವ್​ ಹಾಕಿದ್ದಾರೆ.

ABOUT THE AUTHOR

...view details