ರಿಯಾಗೆ 15 ಕೋಟಿ ರೂ.ವಹಿವಾಟಿನ ಬಗ್ಗೆ ಸುಳ್ಳು ಹೇಳುವಂತೆ ಸುಶಾಂತ್ ಕುಟುಂಬ ಹೇಳಿತ್ತು: ಸಿದ್ಧಾರ್ಥ್ - ಸಿದ್ಧಾರ್ಥ್
ಆತ್ಮಹತ್ಯೆಗೆ ಶರಣಾಗಿರುವ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಕುಟುಂಬ ನನಗೆ 15 ಕೋಟಿ ರೂ ಬಗ್ಗೆ ಸುಳ್ಳು ಹೇಳುವಂತೆ ಹೇಳಿದ್ದರು ಎಂದು ಸಿದ್ಧಾರ್ಥ್ ಪಿಥಾನಿ ಹೇಳಿದ್ದಾರೆ. ರಿಯಾ 15 ಕೋಟಿ ರೂ. ವಹಿವಾಟು ನಡೆಸಿದ್ದಾಳೆಂದು ಫೋನ್ ಮಾಡಿ ಹೇಳಿಕೊಂಡಿದ್ದರು. ಜತೆಗೆ ಪಾಟ್ನಾಗೆ ಬರುವಂತೆಯೂ ಕೇಳಿಕೊಂಡಿದ್ದರು ಎಂದಿದ್ದಾರೆ. ಆದರೆ ತಮಗೇನು ಗೊತ್ತಿದೆ ಎಂಬುದನ್ನು ಮಾತ್ರ ಹೇಳುತ್ತೇನೆಂದು ಕುಟುಂಬದ ಸದಸ್ಯರಿಗೆ ಹೇಳಿದ್ದಾಗಿ ಮಾಹಿತಿ ನೀಡಿದ್ದಾರೆ.