ಶಿವಸೇನೆ ಬಿಜೆಪಿ ಜತೆ ಮತ್ತೆ ಕೈಜೋಡಿಸಬೇಕು, ಇಲ್ಲವಾದ್ರೆ ಶರದ್ ಪವಾರ್ ಎನ್ಡಿಎ ಜತೆ ಬರಲಿ: ಅಠಾವಳೆ - ಕೇಂದ್ರ ಸಚಿವ ರಾಮದಾಸ್ ಅಠವಾಳೆ
ಮುಂಬೈ: ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಂಡಿರುವ ಶಿವಸೇನೆ ಮತ್ತೊಮ್ಮೆ ಬಿಜೆಪಿ ಜತೆ ಬರಬೇಕು. ಇಲ್ಲವೇ ಮಹಾರಾಷ್ಟ್ರದ ಅಭಿವೃದ್ಧಿ ದೃಷ್ಟಿಯಿಂದ ಎನ್ಸಿಪಿ ಮುಖ್ಯಸ್ಥ ಶರದ್ ಪವಾರ್ ಎನ್ಡಿಎ ಜತೆ ಸೇರಲಿ ಎಂದು ಕೇಂದ್ರ ಸಚಿವ ರಾಮದಾಸ್ ಅಠವಾಳೆ ಹೇಳಿದ್ದಾರೆ. ಮುಂಬೈನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಹಾರಾಷ್ಟ್ರದ ಅಭಿವೃದ್ಧಿ ದೃಷ್ಠಿಯಿಂದ ನಾನು ಶರದ್ ಪವಾರ್ ಬಳಿ ಮನವಿ ಮಾಡಿಕೊಳ್ಳುತ್ತೇನೆ ಎಂದಿದ್ದಾರೆ. ಅವರಿಗೆ ಭವಿಷ್ಯದಲ್ಲಿ ದೊಡ್ಡ ಹುದ್ದೆ ಸಿಗಬಹುದು ಎಂದಿರುವ ಅಠವಾಳೆ, ಶಿವಸೇನೆ ಜತೆ ಇರುವುದರಿಂದ ಯಾವುದೇ ರೀತಿಯ ಲಾಭ ಸಿಗಲ್ಲ ಎಂದಿದ್ದಾರೆ.