ಕರ್ನಾಟಕ

karnataka

ETV Bharat / videos

ಹೋಟೆಲ್​​ನಲ್ಲೇ ಒಗ್ಗಟ್ಟು ಪ್ರದರ್ಶನ: ಬಿಜೆಪಿ ಆಮಿಷಕ್ಕೆ ಒಳಗಾಗುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ ಶಾಸಕರು! - ಶಿವಸೇನೆ+ಎನ್​ಸಿಪಿ+ಕಾಂಗ್ರೆಸ್​

By

Published : Nov 25, 2019, 9:55 PM IST

ಮುಂಬೈ: ಮಹಾರಾಷ್ಟ್ರದಲ್ಲಿ ಬಿಜೆಪಿಯಿಂದ ಅನಿರೀಕ್ಷಿತವಾಗಿ ದಿಢೀರ್ ಸರ್ಕಾರ ರಚನೆಯಾದ ಬಳಿಕ ಶಿವಸೇನಾ, ಕಾಂಗ್ರೆಸ್ ಮತ್ತು ಎನ್​ಸಿಪಿ ತಮ್ಮ ಶಾಸಕರನ್ನು ಉಳಿಸಿಕೊಳ್ಳಲು ಹರಸಾಹಸ ಪಡುತ್ತಿದ್ದು, ರೆಸಾರ್ಟ್​ ರಾಜಕೀಯದ ಮೊರೆ ಹೋಗಿವೆ. ಮೂರು ಪಕ್ಷಗಳು ತಮ್ಮ ಶಾಸಕರನ್ನು ಗ್ರ್ಯಾಂಡ್ ಹಯಾತ್​ ಹೋಟೆಲ್​ನಲ್ಲಿ ಸೇರಿಸಿ, ಒಗ್ಗಟ್ಟು ಪ್ರದರ್ಶಿಸಿವೆ. ಈ ವೇಳೆ ಪ್ರತಿಜ್ಞಾವಿಧಿ ಸ್ವೀಕಾರ ಮಾಡಿದ ಮೂರು ಪಕ್ಷದ ಶಾಸಕರು, ನಾವು ಶರದ್​ ಪವಾರ್​, ಉದ್ಧವ್ ಠಾಕ್ರೆ ಹಾಗೂ ಸೋನಿಯಾ ಗಾಂಧಿ ನಾಯಕತ್ವದಲ್ಲಿ ನಮ್ಮ ಪಕ್ಷಕ್ಕೆ ಪ್ರಾಮಾಣಿಕವಾಗಿರುತ್ತೇವೆ ಎಂದು ಪ್ರಮಾಣ ಸ್ವೀಕರಿಸಿದರು. ಜತೆಗೆ ನಾವು ಯಾವುದೇ ಆಮಿಷಕ್ಕೆ ಒಳಗಾಗುವುದಿಲ್ಲ. ಬಿಜೆಪಿಗೆ ಅನುಕೂಲವಾಗುವ ಯಾವುದೇ ಕ್ರಮಕ್ಕೆ ಮುಂದಾಗುವುದಿಲ್ಲ ಎಂದು ಒಗ್ಗಟ್ಟಿನಿಂದ ಹೇಳಿದ್ರು.

ABOUT THE AUTHOR

...view details