ಹೋಟೆಲ್ನಲ್ಲಿ ಎನ್ಸಿಪಿ+ಶಿವಸೇನೆ ಹಾಗೂ ಕೈ ಶಕ್ತಿ ಪ್ರದರ್ಶನ... ರಾಜ್ಯಪಾಲರ ನಿರ್ಧಾರಕ್ಕೆ ಸಡ್ಡು!
ಮುಂಬೈ: ಮಹಾರಾಷ್ಟ್ರದಲ್ಲಿ ದಿಢೀರ್ ಆಗಿ ಸರ್ಕಾರ ರಚನೆ ಮಾಡಿರುವ ಬಿಜೆಪಿ ವಿರುದ್ಧ ಇದೀಗ ಎನ್ಸಿಪಿ+ಶಿವಸೇನೆ ಹಾಗೂ ಕಾಂಗ್ರೆಸ್ ಮುಗಿಬಿದ್ದಿದ್ದು, ರಾಜ್ಯಪಾಲರು ತೆಗೆದುಕೊಂಡಿರುವ ನಿರ್ಧಾರದ ವಿರುದ್ಧ ವಾಗ್ದಾಳಿ ನಡೆಸುತ್ತಿವೆ. ಇದೇ ವೇಳೆ ತಮ್ಮ ಬಳಿ 164 ಶಾಸಕರಿದ್ದು, ರಾಜ್ಯಪಾಲರು ಖುದ್ದಾಗಿ ಬಂದು ನೋಡಬಹುದು ಎಂದು ಶಿವಸೇನೆ ಮುಖಂಡ ಸಂಜಯ್ ರಾವತ್ ಹೇಳಿದ್ದಾರೆ. ಈ ಹಿನ್ನೆಲೆ ಶಕ್ತಿ ಪ್ರದರ್ಶನಕ್ಕಾಗಿ ಗ್ರ್ಯಾಂಡ್ ಹಯಾತ್ ಹೋಟೆಲ್ನಲ್ಲಿ ಸೇರಿದ್ದಾರೆ. ಶಿವಸೇನೆ ಮುಖಂಡ ಉದ್ಧವ್ ಠಾಕ್ರೆ, ಎನ್ಸಿಪಿಯ ಶರದ್ ಪವಾರ್, ಸುಪ್ರಿಯಾ ಸುಳೆ, ಕಾಂಗ್ರೆಸ್ನ ಹಿರಿಯ ಮುಖಂಡ ಮಲ್ಲಿಕಾರ್ಜುನ್ ಖರ್ಗೆ ಸೇರಿದಂತೆ ಅನೇಕರು ಈ ಹೋಟೆಲ್ನಲ್ಲಿ ಸೇರಿದ್ದು, ತಮ್ಮ ಶಕ್ತಿಪ್ರದರ್ಶನ ಮಾಡಿದ್ದಾರೆ.