ಕ್ಲಿನಿಕ್ ಹೆಸರಲ್ಲಿ ಹೈಟೆಕ್ ವೇಶ್ಯಾವಾಟಿಕೆ... ನಾಲ್ವರು ಮಹಿಳೆಯರು ಸೇರಿ 10 ಮಂದಿ ಬಂಧನ - ಮಧ್ಯಪ್ರದೇಶದ ಭೋಪಾಲ್
ಭೋಪಾಲ್(ಮಧ್ಯಪ್ರದೇಶ): ಆಸ್ಪತ್ರೆ ಹೆಸರಿನಲ್ಲಿ ಸೆಕ್ಸ್ ರಾಕೆಟ್ ದಂಧೆ ನಡೆಸಲಾಗುತ್ತಿದ್ದ ಅಡ್ಡೆ ಮೇಲೆ ದಾಳಿ ನಡೆಸಿರುವ ಪೊಲೀಸರು ನಾಲ್ವರು ಮಹಿಳೆಯರು ಸೇರಿದಂತೆ 10 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ. ಆಸ್ಪತ್ರೆಯಲ್ಲಿ ಮಾತ್ರೆಗಳ ಹೆಸರಿನಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ. ಇದೀಗ ಪೊಲೀಸರು ದಾಳಿ ನಡೆಸಿ, ಸೆಕ್ಸ್ ರಾಕೆಟ್ ದಂಧೆಗೆ ಬ್ರೇಕ್ ಹಾಕಿದ್ದಾರೆ.