ಬಾಲಾಕೋಟ್ ದಾಳಿಗೆ 2 ವರ್ಷ: ನೆನಪಿಗೋಸ್ಕರ ನೈಜ ರೀತಿಯ ಅಭ್ಯಾಸ ನಡೆಸಿದ ವಾಯುಪಡೆ.. ವಿಡಿಯೋ - ಬಾಲಾಕೋಟ್ ದಾಳಿಗೆ ಎರಡು ವರ್ಷ
ನವದೆಹಲಿ: ಪುಲ್ವಾಮಾ ದಾಳಿಗೆ 2019ರ ಫೆಬ್ರವರಿ 26ರಂದು ಭಾರತ ಬಾಲಾಕೋಟ್ ಅಟ್ಯಾಕ್ ಮೂಲಕ ತಿರುಗೇಟು ನೀಡಿತ್ತು. ಇದಕ್ಕೆ ಎರಡು ವರ್ಷ ತುಂಬಿದ್ದು, ಅದರ ನೆನಪಿಗೋಸ್ಕರ ವಾಯುಪಡೆ ಇಂದು ಅಭ್ಯಾಸ ನಡೆಸಿತು. ಬಾಲಾಕೋಟ್ ಕಾರ್ಯಾಚರಣೆಯ ಎರಡನೇ ವಾರ್ಷಿಕೋತ್ಸವ ನೆನಪಿಗೋಸ್ಕರ ಅಭ್ಯಾಸ ನಡೆಸಲಾಗಿದ್ದು, ನಿಜವಾದ ರೀತಿಯ ಕಾರ್ಯಾಚರಣೆ ನಡೆಸಲಾಯಿತು. ಈ ವೇಳೆ ಭಾರತೀಯ ವಾಯುಪಡೆಯ ಮುಖ್ಯಸ್ಥ ಆರ್ಕೆಎಸ್ ಭದೌರಿಯಾ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದ ಪೈಲಟ್ಗಳೊಂದಿಗೆ ಕಾಣಿಸಿಕೊಂಡರು.