ಕರ್ನಾಟಕ

karnataka

ETV Bharat / videos

ಕೊರೊನಾ ಹೊಡೆತದ ನಡುವೆ, ಕಡಲ ಕೊರೆತವೂ ತಂದಿದೆ ಆಪತ್ತು: ಹಲವು ಮನೆಗಳು ನೆಲಸಮ

By

Published : Jul 21, 2020, 2:31 PM IST

ಕೊಚ್ಚಿ (ಕೇರಳ): ಕೊಚ್ಚಿಯ ಕರಾವಳಿ ಭಾಗದ ಹಳ್ಳಿಯಾದ ಚೆಲ್ಲಾನಂನಲ್ಲಿ ಮುಂಗಾರಿನ ಹಿನ್ನೆಲೆಯಲ್ಲಿ ಸಮುದ್ರ ಬೋರ್ಗರೆಯುತ್ತಿದೆ. ಪರಿಣಾಮ ಈ ಗ್ರಾಮದ ಮೇಲೆ ಸತತ ಎರಡು ದಿನಗಳಿಂದ ಸಮುದ್ರ ಉಕ್ಕೇರಿ ಬರುತ್ತಿದೆ. ಈಗಾಗಲೇ ಕೊರೊನಾ ವೈರಸ್ ದಾಳಿಯಿಂದ ತತ್ತರಿಸಿರುವ ಈ ಗ್ರಾಮ ಇದೀಗ ಕಡಲಬ್ಬರದಿಂದ ನಡುಗಿ ಹೋಗಿದೆ. ಗ್ರಾಮವು ಕೊರೊನಾದಿಂದ ಕಂಟೇನ್ಮೆಂಟ್​ ಝೋನ್​ ಆಗಿದ್ದು 200ಕ್ಕೂ ಹೆಚ್ಚು ಪಾಸಿಟಿವ್ ಕೇಸ್​ಗಳಿವೆ. ಈ ಮಧ್ಯೆ ಕಡಲು ಉಕ್ಕಿ ಗ್ರಾಮ ಪ್ರವಾಹಕ್ಕೂ ತುತ್ತಾಗಿದೆ. ದೈತ್ಯ ಅಲೆಗಳು ಹಲವು ಮನೆಗಳನ್ನ ನೆಲಸಮಗೊಳಿಸಿದೆ. ಸುಮಾರು ಒಂದು ಡಜನ್​ಗೂ ಹೆಚ್ಚು ಮನೆಗಳಿಗೆ ಭಾಗಶಃ ಹಾನಿಯನ್ನುಂಟು ಮಾಡಿದೆ. ಈ ಹಿಂದೆ ಅಲೆಗಳ ನೀರು ತಲುಪದ ಪ್ರದೇಶಕ್ಕೂ ಈ ಬಾರಿ ಸಮುದ್ರದ ನೀರು ನುಗ್ಗಿದೆ. ಇದು ಗ್ರಾಮದ ಜನರನ್ನ ಚಿಂತೆಗೀಡು ಮಾಡಿದೆ.

ABOUT THE AUTHOR

...view details