ವಾವ್! ಮಹಾರಾಜ್ ವಾವ್!: ರಾಜ್ಯಸಭೆಯಲ್ಲಿ ಸಿಂಧಿಯಾ, ದಿಗ್ವಿಜಯ್ ನಡುವೆ ಹಾಸ್ಯಾಸ್ಪದ ಚರ್ಚೆ!
ನವದೆಹಲಿ: ರಾಜ್ಯಸಭೆಯಲ್ಲಿ ಮಧ್ಯಪ್ರದೇಶದ ಕಾಂಗ್ರೆಸ್ ಸಂಸದ ದಿಗ್ವಿಜಯ್ ಸಿಂಗ್ ಹಾಗೂ ಬಿಜೆಪಿ ಸಂಸದೆ ಜ್ಯೋತಿರಾಧಿತ್ಯ ಸಿಂಧಿಯಾ ನಡುವೆ ಹಾಸ್ಯಾಸ್ಪದ ಚರ್ಚೆ ನಡೆಯಿತು. 2019ರ ಚುನಾವಣೆ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ರೈತರ ಸುಧಾರಣೆಗೋಸ್ಕರ ಅನೇಕ ಭರವಸೆ ನೀಡಿತ್ತು. ಈ ವೇಳೆ ಕೃಷಿ ಸಚಿವರಾಗಿದ್ದ ಶರದ್ ಪವಾರ್ ಕೃಷಿಯಲ್ಲಿ ಖಾಸಗಿ ವಲಯ ಸಹಭಾಗಿತ್ವದ ಅಗತ್ಯವಿದೆ ಎಂದಿದ್ದರು ಎಂದು ಸಿಂಧಿಯಾ ತಿಳಿಸಿದ್ರು. ಇದಕ್ಕೆ ಪ್ರತಿಕ್ರಿಯೆ ನೀಡಿದ ದಿಗ್ವಿಜಯ್ ಸಿಂಗ್ ವಾವ್! ಮಹಾರಾಜ್ ವಾವ್!, ನಾನು ನಿಮ್ಮನ್ನು ಅಭಿನಂದಿಸುತ್ತೇನೆ. ಕಾಂಗ್ರೆಸ್ನಲ್ಲಿದ್ದಾಗ ಎಷ್ಟೊಂದು ಬಲವಾಗಿ ಪಕ್ಷ ನಿಷ್ಠೆ ಇಟ್ಟುಕೊಂಡಿದ್ರೂ ಈಗಲೂ ಬಿಜೆಪಿಗೆ ಬಂದು ಅಷ್ಟೇ ಬಲವಾಗಿ ಪಕ್ಷನಿಷ್ಠೆ ಇಟ್ಟುಕೊಂಡಿದ್ದೀರಿ. ನಿಮಗೆ ನನ್ನ ಅಭಿನಂದನೆಗಳು ಎಂದು ಹಾಸ್ಯ ಚಟಾಕಿ ಹಾರಿಸಿದ್ರು!