ಸ್ವಚ್ಛತೆ ಬಗ್ಗೆ ಪೌರ ಕಾರ್ಮಿಕನಿಂದ ಹಾಡಿನ ಮೂಲಕ ಜಾಗೃತಿ- ವಿಡಿಯೋ ನೋಡಿ - ಪುಣೆ ನೈರ್ಮಲ್ಯ ಕಾರ್ಮಿಕನಿಂದ ಸ್ವಚ್ಛತೆ ಜಾಗೃತಿ ಸುದ್ದಿ
ಪುಣೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕಳೆದ 25 ವರ್ಷಗಳಿಂದ ಕೆಲಸ ಮಾಡುತ್ತಿರುವ ಪೌರ ಕಾರ್ಮಿಕ ಮಹಾದೇವ್ ಜಾಧವ್ ಎಂಬುವರು ಹಾಡುಗಳ ಮೂಲಕ ಸ್ವಚ್ಛತೆ ಮತ್ತು ತ್ಯಾಜ್ಯ ವಿಲೇವಾರಿ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಹೀಗೆ ಹಾಡು ಹೇಳುವಂತೆ ಯಾರೂ ಕೇಳಿಕೊಂಡಿಲ್ಲ. ಆದ್ರೆ ಸ್ವಇಚ್ಛೆಯಿಂದ ಹಾಡುತ್ತೇನೆ. ಈ ಮೂಲಕ ಒಣ ಕಸ ಎಲ್ಲಿ ಹಾಕಬೇಕು ಹಾಗೂ ಹಸಿ ಕಸ ಎಲ್ಲಿ ಹಾಕಬೇಕು ಎಂದು ಜಾಗೃತಿ ಮೂಡಿಸುತ್ತಿದ್ದೇನೆ ಎಂದು ಜಾಧವ್ ಹೇಳಿದ್ದಾರೆ. ಇವರ ಸುಮಧುರ ಕಂಠದ ಜಾಗೃತಿ ಗೀತೆಯನ್ನು ನೀವೂ ಕೇಳಿ...