ಪೊಲೀಸರಿಗೆ ಕೃತಜ್ಞತೆ ಸಲ್ಲಿಸಲು ಮರಳು ಕಲಾಕೃತಿ ಸಿದ್ಧಪಡಿಸಿದ ಸ್ಯಾಂಡ್ ಆರ್ಟಿಸ್ಟ್ ಸುದರ್ಶನ್ ಪಾಟ್ನಾಯಕ್ - ಮನೆಯಲ್ಲೇ ಇರುವಂತೆ ಸುದರ್ಶನ್ ಪಾಟ್ನಾಯಕ್ ಮನವಿ
ದೇಶಾದ್ಯಂತ ಕೊರೊನಾ ಬಿಕ್ಕಟ್ಟು ಎದುರಾಗಿರುವ ಈ ಸಮಯದಲ್ಲಿ ಹಗಲಿರುಳಿಲೆನ್ನದೇ ಶ್ರದ್ಧೆಯಿಂದ ಸೇವೆ ಮಾಡುತ್ತಿರುವ ಪೊಲೀಸರನ್ನು ಖ್ಯಾತ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಶ್ಲಾಘಿಸಿದ್ದಾರೆ. ಒಡಿಶಾದ ಪುರಿಯಲ್ಲಿ ಪೊಲೀಸ್ ಇಲಾಖೆಯ ಕ್ಯಾಪ್ನೊಂದಿಗೆ "ವಿ ಸ್ಟ್ಯಾಂಡ್ ಫರ್ ಯು, ಸ್ಟೇ ಹೋಮ್ ಸ್ಟೇ ಸೇಫ್" ಸಂದೇಶವನ್ನು ಸಾರುವ ಮರಳಿನ ಕಲಾಕೃತಿ ಸಿದ್ಧಪಡಿಸಿ, ಪೊಲೀಸರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಜೊತೆಗೆ ಲಾಕ್ಡೌನ್ ಸಮಯದಲ್ಲಿ ಮನೆಯಲ್ಲಿಯೇ ಇದ್ದು ನಮ್ಮ ಕುಟುಂಬ, ಸಮಾಜ ಮತ್ತು ದೇಶವನ್ನು ರಕ್ಷಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ ಎಂದು ಸುದರ್ಶನ್ ಪಟ್ನಾಯಕ್ ತಿಳಿಸಿದ್ದಾರೆ.
TAGGED:
ಪೊಲೀಸರಿಗೆ ಕೃತಜ್ಞತೆ