ಅವಳಿ ಮಕ್ಕಳ ತಲೆ ಯಶಸ್ವಿಯಾಗಿ ಬೇರ್ಪಡಿಸಿದ ರೋಮ್ ವೈದ್ಯರು! - ವ್ಯಾಟಿಕನ್ ಮಕ್ಕಳ ಆಸ್ಪತ್ರೆ ವೈದ್ಯರು
ರೋಮ್: ವ್ಯಾಟಿಕನ್ ಮಕ್ಕಳ ಆಸ್ಪತ್ರೆ ವೈದ್ಯರು ಅವಳಿ ಮಕ್ಕಳ ತಲೆ ಬುರಡೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಬೇರ್ಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಎರಡು ಅವಳಿ ಮಕ್ಕಳ ತಲೆ ಜೋಡಿಸಿಕೊಂಡು ಜೂನ್ 29,2018ರಂದು ಮಧ್ಯ ಆಫ್ರಿಕಾದ ಎಂಬೈಕಿ ಎಂಬಲ್ಲಿ ಹುಟ್ಟಿದ್ದರು. ಇದೀಗ ಅಪರೂಪದ ಶಸ್ತ್ರಚಿಕಿತ್ಸೆ ಮೂಲಕ ಬೇರ್ಪಡಿಸಲಾಗಿದ್ದು, ಇದೀಗ ಎರಡು ಮಕ್ಕಳು ಆರೋಗ್ಯವಾಗಿವೆ ಎಂದು ವೈದ್ಯರು ತಿಳಿಸಿದ್ದಾರೆ.