ಸಚಿನ್ ತೆಂಡೂಲ್ಕರ್ ಪ್ರತಿ ಪಂದ್ಯವನ್ನು ಗಂಭೀರವಾಗಿ ಪರಿಗಣಿಸುತ್ತಾರೆ... ಇರ್ಫಾನ್ ಪಠಾಣ್ - ಇರ್ಫಾನ್ ಪಠಾಣ್ ಹೇಳಿಕೆ
ರಸ್ತೆ ಸುರಕ್ಷತೆ ವಿಶ್ವ ಸರಣಿಯಲ್ಲಿ ಇಂಡಿಯಾ ಲೆಜೆಂಡ್ಸ್ ಶ್ರೀಲಂಕಾ ಲೆಜೆಂಡ್ಸ್ ತಂಡವನ್ನು 5 ವಿಕೆಟ್‌ಗಳಿಂದ ಸೋಲಿಸಿತು. ಪಂದ್ಯದ ಬಳಿಕ ಮಾತನಾಡಿದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್, ಬೃಹತ್ ಜನ ಸಮೂಹದ ಮುಂದೆ ಆಟವಾಡುವುದು ಸಂತಸ ತಂದಿದೆ. ಪ್ರತಿಯೊಂದು ಕ್ಷಣವನ್ನು ಆನಂದಿಸಿದ್ದೇನೆ ಎಂದರು. ಅಲ್ಲದೇ ಕ್ರಿಕೆಟ್ಗೆ ಪೂರ್ವ ಸಿದ್ದತೆ ಅಗತ್ಯ. ಏಕೆಂದರೆ ಲೆಜೆಂಡ್ ಸಚಿನ್ ತೆಂಡೂಲ್ಕರ್ ಅವರೊಂದಿಗೆ ಆಡುವಾಗ ಅವರು ಪ್ರತಿ ಕ್ರಿಕೆಟ್ ಪಂದ್ಯವನ್ನು ಗಂಭೀರವಾಗಿ ಪರಿಗಣಿಸುತ್ತಾರೆ ಎಂಬುದು ಗೊತ್ತಾಗುತ್ತದೆ ಎಂದರು.