ಆರ್ಜೆಡಿ ‘ವಿಧಾನಸಭಾ ಮುತ್ತಿಗೆ’ ಪ್ರತಿಭಟನೆ ವೇಳೆ ಗದ್ದಲ : ತೇಜಸ್ವಿ ಯಾದವ್ ಪೊಲೀಸ್ ವಶಕ್ಕೆ - ಆರ್ಜೆಡಿ ನಾಯಕ ತೇಜಸ್ವಿ ಯಾದವ್
ಪಾಟ್ನಾ (ಬಿಹಾರ): ಆರ್ಜೆಡಿ ಪಕ್ಷ ರಾಜ್ಯಾದ್ಯಂತ ಕರೆ ನೀಡಿದ್ದ ‘ವಿಧಾನಸಭಾ ಮುತ್ತಿಗೆ’ ಹಿಂಸೆಗೆ ತಿರುಗಿದೆ. ಆರ್ಜೆಡಿ ಕಾರ್ಯಕರ್ತರ ಮೇಲೆ ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ. ಬ್ಯಾರಿಕೇಡ್ ತಳ್ಳಿ ಮುನ್ನುಗ್ಗುತ್ತಿದ್ದಾಗ ತಡೆಯಲು ಬಂದ ಪೊಲೀಸರ ಮೇಲೆ ಕಲ್ಲು ತೂರಾಟ ನಡೆದಿದೆ. ಇದರಿಂದ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ಈ ಹಿನ್ನೆಲೆ ಆರ್ಜೆಡಿ ನಾಯಕ ತೇಜಸ್ವಿ ಯಾದವ್ ಹಾಗೂ ತೇಜ್ ಪ್ರತಾಪ್ ಯಾದವ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.