ದೆಹಲಿ ಹಿಂಸಾಚಾರಕ್ಕೆ ಬಿಜೆಪಿ ನಾಯಕರೇ ಕಾರಣ: ಆರ್‌ಜೆಡಿ ನಾಯಕ ಮನೋಜ್ ಜಾ ಆರೋಪ - ದೆಹಲಿ ಹಿಂಸಾಚಾರ ಬಗ್ಗೆ ಆರ್‌ಜೆಡಿ ನಾಯಕ ಮನೋಜ್ ಜಾ ಆರೋಪ
ನವದೆಹಲಿ: ಈಶಾನ್ಯ ದೆಹಲಿಯಲ್ಲಿ ನಡೆದ ಹಿಂಸಾಚಾರ, ಸಾವು ನೋವಿಗೆ ಕೇಂದ್ರ ಸಚಿವ ಅನುರಾಗ್ ಠಾಕೂರ್, ಬಿಜೆಪಿಯ ಕಪಿಲ್ ಮಿಶ್ರಾ ಮತ್ತು ಸಂಸದ ಪ್ರವೀಶ್ ವರ್ಮಾ ಅವರೇ ಕಾರಣ ಎಂದು ಎಂದು ಆರ್‌ಜೆಡಿ ನಾಯಕ ಮನೋಜ್ ಜಾ ಆರೋಪಿಸಿದ್ದಾರೆ. ಅಲ್ಲದೆ ಘಟನೆಯಲ್ಲಿ ತಪ್ಪಿತಸ್ಥರಿಗೆ ಈಗ ಶಿಕ್ಷೆಯಾಗಬೇಕು. 1984ರ ಸಿಖ್ ವಿರೋಧಿ ಗಲಭೆಯ ಭಯಾನಕ ದೃಶ್ಯಗಳು ಪುನರಾವರ್ತಿತವಾಗಿದ್ದು, ಜನಸಾಮಾನ್ಯರು ಸಂಕಷ್ಟಕ್ಕೀಡಾಗಿದ್ದಾರೆ. ದುಷ್ಕರ್ಮಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆಗ್ರಹಿಸಿ ಹಾಗೂ ದೆಹಲಿಯಾದ್ಯಂತ ಏಕತೆಯ ಸಂದೇಶ ಸಾರುವ ನಿಟ್ಟಿನಲ್ಲಿ ಶಾಂತಿಯುತ ಮೆರವಣಿಗೆ ನಡೆಸಲು ಅನುಮತಿ ಪಡೆಯಲು ಪಕ್ಷದ ಮುಖಂಡರೊಂದಿಗೆ ರಾಷ್ಟ್ರಪತಿ ಭೇಟಿ ಮಾಡಲಾಗುವುದು ಎಂದು ತಿಳಿಸಿದರು.
Last Updated : Mar 1, 2020, 7:09 AM IST