ಲಾಕ್‌ಡೌನ್ ವೇಳೆ ಘೇಂಡಾಮೃಗ ಗಸ್ತು: ರಸ್ತೆಯಲ್ಲಿ ತಿರುಗುತ್ತಿದ್ದ ವ್ಯಕ್ತಿಯನ್ನು ಮನೆಗಟ್ಟಿದ ಪ್ರಾಣಿ - ಲಾಕ್‌ಡೌನ್ ಆದೇಶ
ಲಾಕ್‌ಡೌನ್ ವೇಳೆ ಎಲ್ಲರೂ ಮನೆಯಲ್ಲಿರುವುದು ಕಡ್ಡಾಯ. ಆದರೆ ಪೊಲೀಸರ ಕಣ್ತಪ್ಪಿಸಿ ಜನರು ರಸ್ತೆಗಿಳಿಯುವುದು ಸಾಮಾನ್ಯವಾಗುತ್ತಿದೆ. ಮನೆಯಲ್ಲಿರದೆ ಬೀದಿಯಲ್ಲಿ ಅಡ್ಡಾಡುತ್ತಿದ್ದ ವ್ಯಕ್ತಿಗೆ ಘೇಂಡಾಮೃಗ ತಕ್ಕ ಪಾಠ ಕಲಿಸಿದೆ. ಆತನನ್ನು ನೋಡಿದ ತಕ್ಷಣ ಮುಲಾಜಿಲ್ಲದೆ ಮನೆಗೋಡಿಸಿ ತಾನು ತನ್ನ ಪಾಡಿಗೆ ಕಾಡಿನ ಕಡೆಗೆ ಗಾಂಭೀರ್ಯದ ಹೆಜ್ಜೆ ಹಾಕಿತು. ಲಾಕ್‌ಡೌನ್ ಸನ್ನಿವೇಶಕ್ಕೆ ಹೋಲುವ ಕುತೂಹಲಕಾರಿ ವಿಡಿಯೋವನ್ನು ಐಎಫ್ಎಸ್ ಅಧಿಕಾರಿ ಪರವೀನ್ ಕಸ್ವಾನ್ ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿದ್ದಾರೆ. ಅಂದಹಾಗೆ, ಈ ಘಟನೆ ಭಾರತದಲ್ಲಿ ನಡೆದಿದ್ದಲ್ಲ. ನೆರೆಯ ದೇಶ ನೇಪಾಳದ್ದು. ಅಲ್ಲಿನ ಚಿತ್ವಾನ್ ರಾಷ್ಟ್ರೀಯ ಉದ್ಯಾನದ ಮುಂಭಾಗದ ರಸ್ತೆಯಲ್ಲಿ ನಡೆದಿದೆ.