ಸಿದ್ದರಾಮಯ್ಯರನ್ನ ಹೊಗಳಿ, ಸಿಎಂ ಬಿಎಸ್ವೈಗೆ ಕಿವಿಮಾತು ಹೇಳಿದ ರಮೇಶ್ ಕುಮಾರ್: ವಿಡಿಯೋ - Ramesh Kumar
ಬೆಂಗಳೂರು: ವಿಧಾನಸಭೆಯಲ್ಲಿ ಶಾಸಕ ರಮೇಶ್ ಕುಮಾರ್ ಅವರು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪನವರ ಬಗ್ಗೆ ಮಾತನಾಡಿದ್ದಾರೆ. ಸಿದ್ದರಾಮಯ್ಯನವರು ಬಜೆಟ್ ಬಗ್ಗೆ ಮಾತನಾಡುವಾಗ ಪ್ರಾಥಮಿಕ ಶಾಲಾ ಮಕ್ಕಳಿಗೂ ಅರ್ಥವಾಗುವ ರೀತಿಯಲ್ಲಿ ಬಿಡಿಸಿ ಬಿಡಿಸಿ ಹೇಳಿದ್ದರು. ಬಜೆಟ್ನ ವಿಚಾರಲ್ಲಿ ಅಷ್ಟು ನೈಪುಣ್ಯತೆ, ಸಾಮರ್ಥ್ಯದಿಂದ ಮಾತನಾಡೋ ವ್ಯಕ್ತಿನ ನಾನೆಲ್ಲೂ ನೋಡೇ ಇಲ್ಲ ಎಂದು ಹಾಡಿ ಹೊಗಳಿದರು. ಇದೇ ವೇಳೆ, ನೀವು ಅಧಿಕಾರಕ್ಕೆ ಬಂದ ಮೇಲೆ ಕೋವಿಡ್, ಪ್ರವಾಹದಂತ ಅನೇಕ ಪಾಕೃತಿಕ ವಿಕೋಪಗಳನ್ನ ಎದುರಿಸಿದ್ದೀರಿ. ಹಿಂದೆ ಹೇಳಿದ್ದ ಮಾತನ್ನ ಮತ್ತೆ ಹೇಳುವೆ, ದಯಮಾಡಿ ಅಂತಃ ಕರಣ ಇರುವ ಸರ್ಕಾರವಾಗಿ. ಬಹುಮತವನ್ನೇ ನೆಚ್ಚಿಕೊಳ್ಳುವ ಸರ್ಕಾರ ಆಗಬೇಡಿ. ಬ್ಯಾಂಡ್ಸೆಟ್ ವಿಚಾರದಲ್ಲಿ ಹುಷಾರಾಗಿರಿ, ಅಧಿಕಾರ ಶಾಶ್ವತ ಅಲ್ಲ ಎಂದು ಸಿಎಂ ಬಿಎಸ್ವೈಗೆ ರಮೇಶ್ ಕುಮಾರ್ ಸಲಹೆ ನೀಡಿದರು.