'ಲಸಿಕೆಗಾಗಿ ದನಿ ಎತ್ತಿ' - ಮನಮುಟ್ಟುವ ವಿಡಿಯೋದೊಂದಿಗೆ ದೇಶದ ಜನತೆಗೆ ರಾಗಾ ಕರೆ - Rahul Gandhi tweet
ನವದೆಹಲಿ: ದೇಶದಲ್ಲಿ ಮಹಾಮಾರಿ ಕೊರೊನಾ ಉಲ್ಬಣಿಸಿರುವ ಈ ವೇಳೆಯಲ್ಲಿ ಎಲ್ಲರಿಗೂ ಶೀಘ್ರದಲ್ಲೇ ಲಸಿಕೆ ಸಿಗಬೇಕೆಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಇಡೀ ದೇಶಕ್ಕೆ ಕೊರೊನಾ ಲಸಿಕೆಯ ಅಗತ್ಯವಿದೆ. ಪ್ರತಿಯೊಬ್ಬರಿಗೂ ಸುರಕ್ಷಿತ ಜೀವನದ ಹಕ್ಕಿದೆ. ಲಸಿಕೆಗಾಗಿ ದನಿ ಎತ್ತಿ ಎಂದು ಮನಮುಟ್ಟುವ ವಿಡಿಯೋದೊಂದಿಗೆ ದೇಶದ ಜನತೆಗೆ ಕರೆ ನೀಡಿದ್ದಾರೆ.