Watch - ಹಿಮಾಚಲದ ಗುಡ್ಡಗಾಡು ಪ್ರದೇಶಗಳಲ್ಲಿ ಮಳೆ ಜೊತೆ ತಾಜಾ ಹಿಮಪಾತ - ಶಿಮ್ಲಾದಲ್ಲಿ ಮಳೆ ಹಿಮಪಾತ
ಶಿಮ್ಲಾ (ಹಿಮಾಚಲ ಪ್ರದೇಶ): ಶಿಮ್ಲಾ, ಚಂಬಾ, ಕಿನ್ನೌರ್, ಲಾಹೌಲ್-ಸ್ಪಿತಿ, ಕುಲು ಜಿಲ್ಲೆ ಸೇರಿದಂತೆ ಹಿಮಪಾತ ಪ್ರದೇಶದ ಗುಡ್ಡಗಾಡು ಪ್ರದೇಶಗಳಲ್ಲಿ ಈ ಋತುವಿನ ಹಿಮಪಾತ ಆರಂಭವಾಗಿದ್ದು, ನಿಸರ್ಗ ಸೌಂದರ್ಯವನ್ನು ಸವಿಯಲು ಎರಡು ಕಣ್ಣು ಸಾಲದು. ಆದರೆ ಮಳೆ ಮತ್ತು ತಾಜಾ ಹಿಮಪಾತದಿಂದಾಗಿ ತಾಪಮಾನದಲ್ಲಿ ತೀವ್ರ ಕುಸಿತ ಉಂಟಾಗಿದ್ದು, ಇಡೀ ರಾಜ್ಯವೇ ಚಳಿಯಲ್ಲಿ ನಡುಗುತ್ತಿದೆ. ಹೀಗಾಗಿ ಮುಂದಿನ ಕೆಲ ದಿನಗಳ ವರೆಗೆ ಮುನ್ನೆಚ್ಚರಿಕೆ ವಹಿಸುವಂತೆ ಹವಾಮಾನ ಇಲಾಖೆ ರಾಜ್ಯದ ಜನತೆಗೆ ಸೂಚಿಸಿದೆ.