ನಾವು ಅಧಿಕಾರದಲ್ಲಿದ್ದಿದ್ದರೆ 15 ನಿಮಿಷದೊಳಗೆ ಚೀನಾ ಹೊರಹಾಕುತ್ತಿದ್ದೆವು: ರಾಗಾ - ಟ್ರ್ಯಾಕ್ಟರ್ ರ್ಯಾಲಿ
ಹರಿಯಾಣ: ನಮ್ಮ ಭೂಮಿಯನ್ನು ಯಾರೂ ತೆಗೆದುಕೊಂಡಿಲ್ಲ ಎಂದು ಹೇಡಿ ಪ್ರಧಾನಿ ಹೇಳುತ್ತಾರೆ. ಆದರೆ ಇಂದು ಜಗತ್ತಿನಲ್ಲಿ ಕೇವಲ ಒಂದು ದೇಶದ ಭೂಮಿಯನ್ನ (ಭಾರತ) ಮತ್ತೊಂದು ದೇಶ(ಚೀನಾ) ತೆಗೆದುಕೊಂಡಿದೆ. ಇಷ್ಟಾದರೂ ಪ್ರಧಾನಿ ತಮ್ಮನ್ನು 'ದೇಶಭಕ್ತ' ಎಂದು ಕರೆದುಕೊಳ್ಳುತ್ತಾರೆ. ಒಂದು ವೇಳೆ ನಾವು ಅಧಿಕಾರದಲ್ಲಿದ್ದಿದ್ದರೆ ಕೇವಲ 15 ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ಚೀನಾ ಹೊರಹಾಕುತ್ತಿದ್ದೇವು ಎಂದು ರಾಹುಲ್ ಗಾಂಧಿ ಹೇಳಿದ್ದಾರೆ. ಹರಿಯಾಣದ ಕುರುಕ್ಷೇತ್ರದಲ್ಲಿ ಕೃಷಿ ಮಸೂದೆ ವಿರೋಧಿ ಪ್ರತಿಭಟನೆಯಲ್ಲಿ ಭಾಗಿಯಾಗಿ ಅವರು ಮಾತನಾಡಿದರು.
Last Updated : Oct 6, 2020, 10:37 PM IST