ರೈತರನ್ನು ಮುಗಿಸಲು ಕೇಂದ್ರದಿಂದ ಮೂರು ಕೃಷಿ ಕಾನೂನು ಜಾರಿ: ರಾಹುಲ್ ವಾಗ್ದಾಳಿ - ಜಂತರ್ ಮಂತರ್ನಲ್ಲಿ ರಾಹುಲ್ ಗಾಂಧಿ
ನವದೆಹಲಿ: ಕೇಂದ್ರ ಸರ್ಕಾರ ರೈತರನ್ನು ಮುಗಿಸುವ ಉದ್ದೇಶದಿಂದ ಮೂರು ಕೃಷಿ ಕಾನೂನು ಜಾರಿಗೊಳಿಸಿದ್ದು, ಇವುಗಳನ್ನು ನಾವು ತಡೆಯದಿದ್ದರೆ, ಬೇರೆ ವಲಯಗಳ ಮೇಲೂ ಕೇಂದ್ರ ಸರ್ಕಾರ ಇಂತಹ ಕಾನೂನು ಜಾರಿ ಮಾಡಲಿದೆ ಎಂದು ರಾಹುಲ್ ಗಾಂಧಿ ತಿಳಿಸಿದ್ದಾರೆ. ಕೃಷಿ ಕಾಯ್ದೆಗಳ ವಿರುದ್ಧ ಜಂತರ್ ಮಂತರ್ನಲ್ಲಿ ಸಂಸದರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಭಾಗಿಯಾಗಿ ಅವರು ಮಾತನಾಡಿದರು. ಪ್ರಧಾನಿ ನರೇಂದ್ರ ಮೋದಿ ರೈತರಿಗೆ ಗೌರವ ನೀಡುತ್ತಿಲ್ಲ ಎಂದು ಅವರು ಹೇಳಿದ್ದಾರೆ. ಇವರಿಗೆ ಎಐಸಿಸಿ ಉತ್ತರ ಪ್ರದೇಶ ಪ್ರದಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ಸಾಥ್ ನೀಡಿದರು.