ಯುವಕರನ್ನ ಪ್ರೇರೆಪಿಸಲು ರಾಹುಲ್ ದಲಿತ ಹುಡುಗಿ ಮದುವೆಯಾಗಲಿ: ಕೇಂದ್ರ ಸಚಿವ ಅಠಾವಳೆ - ಕೇಂದ್ರ ಸಚಿವ ರಾಮದಾಸ್ ಅಠಾವಳೆ
ನವದೆಹಲಿ: 'ಹಮ್ ದೋ ಹಮಾರೆ ದೋ' ಎಂಬ ಘೋಷಣೆ ಈ ಹಿಂದೆ ಕುಟುಂಬ ಯೋಜನೆಗೆ ಬಳಕೆ ಮಾಡಲಾಗ್ತಿತ್ತು. ರಾಹುಲ್ ಗಾಂಧಿ ಇದನ್ನ ಪ್ರಚಾರ ಮಾಡಲು ಬಯಸಿದ್ರೆ ಮೊದಲು ಮದುವೆಯಾಗಬೇಕು. ಜಾತಿವಾದ ತೊಡೆದು ಹಾಕಲು ದಲಿತ ಹುಡುಗಿಯನ್ನ ಮದುವೆಯಾಗಬೇಕು ಎಂದು ಕೇಂದ್ರ ಸಚಿವ ಅಠಾವಳೆ ಹೇಳಿದ್ದಾರೆ. ಮಹಾತ್ಮಾ ಗಾಂಧಿ ಅವರ ಕನಸು ಹಾಗೂ ಯುವಕರನ್ನ ಪ್ರೇರೆಪಿಸಲು ಇದು ಸಹಕಾರಿಯಾಗಲಿದೆ ಎಂದು ಇದೇ ವೇಳೆ ಹೇಳಿಕೊಂಡಿದ್ದಾರೆ.