ಕೃಷಿ ಕಾನೂನು ಹಿಂತೆಗೆದುಕೊಳ್ಳಿ, ಆಗ ರೈತರೇ ನಿಮ್ಮೊಂದಿಗೆ ಮಾತಾಡುತ್ತಾರೆ: ಮೋದಿಗೆ ರಾಗಾ ಟಾಂಗ್ - agri laws
ಹನುಮಾನ್ಗಢ (ರಾಜಸ್ಥಾನ): ರೈತರೊಂದಿಗೆ ನಾವು ಮಾತನಾಡಬಯಸುತ್ತೇವೆ ಎಂದು ಪಿಎಂ ಮೋದಿ ಹೇಳುತ್ತಾರೆ. ಮೊದಲು ಕೃಷಿ ಕಾನೂನುಗಳನ್ನು ಹಿಂತೆಗೆದುಕೊಳ್ಳಿ, ಆಗ ರೈತರೇ ನಿಮ್ಮೊಂದಿಗೆ ಮಾತಾಡುತ್ತಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದರು. ರಾಜಸ್ಥಾನದ ಹನುಮಾನಗಢದಲ್ಲಿ ಕಿಸಾನ್ ಮಹಾಪಂಚಾಯತ್ನಲ್ಲಿ ಮಾತನಾಡಿದ ಅವರು, ಮೊದಲು ರೈತರ ಜಮೀನು ಕಸಿದುಕೊಂಡಿರಿ, ಅವರ ಭವಿಷ್ಯವನ್ನು ಕಸಿದುಕೊಂಡಿರಿ. ಈಗ ಅವರೊಂದಿಗೆ ಮಾತನಾಡಬೇಕು ಎಂದು ಹೇಳುತ್ತೀರಿ. ಅದರ ಅವಶ್ಯಕತೆಯಿಲ್ಲ ಎಂದು ಮೋದಿ ವಿರುದ್ಧ ಕಿಡಿಕಾರಿದರು.