ವೈನ್ ಶಾಪ್ ಮುಂದೆ ಪುರುಷರಿಗಿಂತ ಮಹಿಳೆಯರೇ ಜಾಸ್ತಿ... ಇಷ್ಟೊಂದು ಕ್ಯೂ ನಿಂತಿದ್ದು ಎಲ್ಲಿ!? - ದೇಶಾದ್ಯಂತ ಮದ್ಯದ ಅಂಗಡಿ ಓಪನ್
ಮುಂಬೈ: ದೇಶಾದ್ಯಂತ ಕೆಲವೊಂದು ನಿಯಮಗಳೊಂದಿಗೆ ಮದ್ಯ ಮಾರಾಟ ಮಾಡಲು ಅವಕಾಶ ನೀಡಲಾಗಿದೆ. ಆದರೆ, ಕೆಲ ಪ್ರದೇಶಗಳಲ್ಲಿ ಷರತ್ತು ಗಾಳಿಗೆ ತೂರಿ ಎಣ್ಣೆ ಖರೀದಿ ಮಾಡಲಾಗ್ತಿದೆ. ಸದ್ಯ ಮಹಾರಾಷ್ಟ್ರದ ಥಾಣೆಯ ಅಂಬಾಡಿ ಗ್ರಾಮದಲ್ಲಿನ ಎಣ್ಣೆ ಅಂಗಡಿ ಎದುರು ಮಹಿಳೆಯರೇ ಹೆಚ್ಚು ಕ್ಯೂ ನಿಂತಿದ್ದು ಕಂಡು ಬಂದಿದೆ. ಎಣ್ಣೆ ಖರೀದಿ ಮಾಡಲು ಅವರು ಕ್ಯೂನಲ್ಲಿ ನಿಂತಿದ್ದರು. ಅದರ ವಿಡಿಯೋ ಈಗ ವೈರಲ್ ಆಗಿದೆ.