ಸಾರ್ವಜನಿಕರೊಂದಿಗೆ ಬೆರೆತ ಪುದುಚೇರಿ ಗವರ್ನರ್: ಸರ್ಕಾರಿ ಬಸ್ನಲ್ಲಿ ಪ್ರಯಾಣ - ಸಾರ್ವಜನಿಕರೊಂದಿಗೆ ಬೆರೆತ ಪುದುಚೇರಿ ಗವರ್ನರ್
ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಆಗಿ ಹೆಚ್ಚುವರಿ ಜವಾಬ್ದಾರಿ ವಹಿಸಿಕೊಂಡಿರುವ ತೆಲಂಗಾಣ ರಾಜ್ಯಪಾಲೆ ಡಾ.ತಮಿಳಿಸೈ ಸೌಂದರರಾಜನ್ ಇಂದು ಸಾರ್ವಜನಿಕರೊಂದಿಗೆ ಬೆರೆತು ಸಮಸ್ಯೆ ಆಲಿಸಿದ್ದಾರೆ. ಸರ್ಕಾರಿ ಬಸ್ನಲ್ಲಿ ಪ್ರಯಾಣ ಬೆಳೆಸಿದ ಅವರು, ಪ್ರಯಾಣಿಕರೊಂದಿಗೆ ಮಾತುಕತೆ ನಡೆಸಿದರು. ಪುದುಚೇರಿಯ ಆಂಥೋನಿಯಾರ್ ಚರ್ಚ್ ಬಸ್ ನಿಲ್ದಾಣದಿಂದ ತವಲಕುಪ್ಪಂ ಜಂಕ್ಷನ್ವರೆಗೆ ಅವರು ಪ್ರಯಾಣಿಸಿದರು.