ಅಸ್ಸೋಂನ ಸಿಲ್ಚಾರ್ ವಿಮಾನ ನಿಲ್ದಾಣದಲ್ಲಿ ಪಾಕ್ ಪರ ಘೋಷಣೆ ಕೂಗಿದ ಕಿಡಿಗೇಡಿಗಳು - ಅಸ್ಸೋಂ ಸುದ್ದಿ
ಅಸ್ಸೋಂ: ಎಐಯುಡಿಎಫ್ ಮುಖ್ಯಸ್ಥ ಬಬ್ರುದ್ದೀನ್ ಅಜ್ಮಲ್ ಆಗಮನದ ವೇಳೆ ಪಾಕಿಸ್ತಾನದ ಪರ ಘೋಷಣೆ ಕೂಗಿರುವ ಘಟನೆ ಇಲ್ಲಿನ ಸಿಲ್ಚಾರ್ ವಿಮಾನ ನಿಲ್ದಾಣದ ಬಳಿ ನಡೆದಿದೆ. ಎಐಯುಡಿಎಫ್ ಮುಖ್ಯಸ್ಥ ಬದ್ರುದ್ದೀನ್ ಅಜ್ಮಲ್ ಅವರ ಬೆಂಬಲಿಗರು ವಿಮಾನ ನಿಲ್ದಾಣದ ಬಳಿ ಜಮಾಯಿಸಿದ್ದರು. ಬಬ್ರುದ್ದೀನ್ ವಿಮಾನದಿಂದಿಳಿದು ಹೊರಬರುತ್ತಿದ್ದತೆಯೇ ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಘೋಷಣೆ ಕೂಗುವ ಮೂಲಕ ಉದ್ಧಟತನ ಮೆರೆದಿದ್ದಾರೆ.