ಪ್ರಜಾಪ್ರಭುತ್ವ, ಜಾತ್ಯತೀತತೆಯ ಸೋಲು; ಹಿಂದುತ್ವದ ಯಶಸ್ಸಿನ ದಿನ: ಅಸಾದುದ್ದೀನ್ ಓವೈಸಿ - ಅಸಾದುದ್ದೀನ್ ಓವೈಸಿ
ಹೈದರಾಬಾದ್: ಭಾರತ ಜಾತ್ಯಾತೀತ ದೇಶ. ರಾಮ ಮಂದಿರ ಭೂಮಿ ಪೂಜೆಗೆ ಅಡಿಪಾಯ ಹಾಕುವುದರ ಮೂಲಕ ಪ್ರಧಾನಿ ಮೋದಿ ಸಂವಿಧಾನದ ತತ್ವಗಳನ್ನು ಉಲ್ಲಂಘಿಸಿದ್ದಾರೆ. ಇದು ಪ್ರಜಾಪ್ರಭುತ್ವ ಹಾಗೂ ಜಾತ್ಯತೀತತೆಯ ಸೋಲು ಹಾಗೂ ಹಿಂದುತ್ವದ ಯಶಸ್ಸಿನ ದಿನ ಎಂದು ಎಐಎಂಐಎಂ ಪಕ್ಷದ ನಾಯಕ ಅಸಾದುದ್ದೀನ್ ಓವೈಸಿ ಟೀಕಿಸಿದ್ದಾರೆ.