'ರಾಮ ಭಕ್ತರ' ಮೇಲೆ ಕಲ್ಲು ತೂರಾಟ: ಸಂಸದೆ ಪ್ರಜ್ಞಾ ಸಿಂಗ್ ಪ್ರತಿಕ್ರಿಯೆ ಹೀಗೆ - ರಾಮ್ ಭಕ್ತರ ಮೇಲೆ ನಡೆದ ಕಲ್ಲು ತೂರಾಟ ಪ್ರಕರಣ
ಮುಂಬೈ: ರಾಮ ದೇವಾಲಯ ನಿರ್ಮಾಣಕ್ಕಾಗಿ ಹಣ ಸಂಗ್ರಹ ಮಾಡುತ್ತಿರುವ ರಾಮ ಭಕ್ತರ ಮೇಲೆ ನಡೆದ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್ ಪ್ರತಿಕ್ರಿಯೆ ನೀಡಿದ್ದಾರೆ. ಭಕ್ತರ ಮೇಲೆ ದಾಳಿ ನಡೆಸುತ್ತಿರುವವರಿಗೆ ಮಧ್ಯಪ್ರದೇಶ ಸರ್ಕಾರ ಸೂಕ್ತ ತಿರುಗೇಟು ನೀಡುತ್ತಿದೆ. ಇಂತಹ ದಾಳಿಗಳು ಕೋಮು ಶಾಂತಿಗೆ ಭಂಗ ತರುವ ಎಡಪಂಥೀಯರ ಪ್ರಯತ್ನ. ಅಂತಹವರನ್ನ ಶಿಕ್ಷಿಸಲು ಕಾನೂನು ರೂಪಿಸಬೇಕು ಎಂದಿದ್ದಾರೆ. 2008ರ ಮಾಲೇಗಾಂವ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಇಂದು ಎನ್ಐಎ ವಿಶೇಷ ನ್ಯಾಯಾಲಯದ ಮುಂದೆ ಹಾಜರಾಗಲು ಆಗಮಿಸಿದ್ದ ವೇಳೆ ಈ ಮಾತು ಹೇಳಿದ್ದಾರೆ. 2008ರಲ್ಲಿ ಮಾಲೇಗಾಂವ್‌ನಲ್ಲಿ ನಡೆದ ಬಾಂಬ್ ಸ್ಫೋಟದಲ್ಲಿ 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಆರು ಮಂದಿ ಸಾವನ್ನಪ್ಪಿದ್ದರು.