ಲಾಕ್ಡೌನ್ ಉಲ್ಲಂಘಿಸಿದವರಿಗೆ ಮಂಗಳಾರತಿ ಎತ್ತಿ, ಕೈಯಲ್ಲಿ ಬಾಳೆಹಣ್ಣು ಇಟ್ಟ ಪೊಲೀಸರು - Police 'aarti' of people
ಕಾನ್ಪುರ್(ಉತ್ತರ ಪ್ರದೇಶ): ದೇಶದಲ್ಲಿ ಕೊರೊನಾ ನಿಯಂತ್ರಣಕ್ಕೆ ತರುವ ಸದುದ್ದೇಶದಿಂದ ಕೇಂದ್ರ ಸರ್ಕಾರ ಲಾಕ್ಡೌನ್ ಘೋಷಣೆ ಮಾಡಿ ಮನೆಯಿಂದ ಯಾರೂ ಹೊರಬರದಂತೆ ಮನವಿ ಮಾಡಿದೆ. ಆದರೆ ಇದಾವುದನ್ನು ಲೆಕ್ಕಿಸದ ಜನರು ಬೇಕಾ ಬಿಟ್ಟಿಯಾಗಿ ಓಡಾಡುತ್ತಲೇ ಇದ್ದಾರೆ. ಲಾಕ್ಡೌನ್ ಪ್ರಾರಂಭವಾದಾಗಿನಿಂದಲೂ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುತ್ತಿದ್ದು, ಲಾಠಿ ರುಚಿಯನ್ನು ತೋರಿಸಿದ್ದಾಗಿದೆ. ಆದರೆ ಇದಾವುದಕ್ಕೂ ಜಗ್ಗದ ಜನರಿಗೆ ರಸ್ತೆ ಮಧ್ಯದಲ್ಲಿಯೇ ಮಂಗಳಾರತಿ ತೋರಿ ಪ್ರಸಾದ ರೂಪವಾಗಿ ಬಾಳೆ ಹಣ್ಣನ್ನು ನೀಡುವ ಮೂಲಕ ಲಾಕ್ಡೌನ್ ಉಲ್ಲಂಘಿಸಿದ ಜನರಿಗೆ ಮುಜುಗರವಾಗುವಂತೆ ಮಾಡಿದ್ದಾರೆ ಕಾನ್ಪುರ್ ಪೊಲೀಸರು. ಆರತಿ ಎತ್ತಿ ಬಾಳೆ ಹಣ್ಣು ನೀಡಿದ ದೃಶ್ಯ ಇಲ್ಲಿದೆ ನೋಡಿ.