ಕರ್ನಾಟಕ

karnataka

ETV Bharat / videos

'ಚಕ್ಕಾ ಜಾಮ್': ದೆಹಲಿ ಗಡಿ ಸೇರಿದಂತೆ ವಿವಿಧ ಭಾಗಗಳಲ್ಲಿ ಅರೆಸೈನಿಕ ಪಡೆಯಿಂದ ಹೈ ಅಲರ್ಟ್​ - ನೂತನ ಕೃಷಿ ಕಾಯ್ದೆ ಖಂಡಿಸಿ ಚಕ್ಕಾ ಜಾಮ್

By

Published : Feb 6, 2021, 10:52 AM IST

ನವದೆಹಲಿ/ಯುಪಿ: ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನಾಕಾರರು ಗಾಜಿಪುರ (ದೆಹಲಿ-ಯುಪಿ) ಗಡಿಯಲ್ಲಿ ತಮ್ಮ ಆಂದೋಲನವನ್ನು ಮುಂದುವರಿಸಿದ್ದಾರೆ. ಇಂದು ರೈತರು ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳನ್ನು ಬಂದ್​ ಮಾಡುವ ಮೂಲಕ ‘ಚಕ್ಕಾ ಜಾಮ್’ ನಡೆಸಲಿರುವ ಹಿನ್ನೆಲೆ ದೆಹಲಿ-ಎನ್‌ಸಿಆರ್‌ನ ವಿವಿಧ ಭಾಗಗಳಲ್ಲಿ ಅರೆಸೈನಿಕ ಪಡೆಗಳನ್ನು ನಿಯೋಜಿಸಲಾಗಿದೆ. ದೆಹಲಿ-ಎನ್‌ಸಿಆರ್ ಪ್ರದೇಶದಲ್ಲಿ ದೆಹಲಿ ಪೊಲೀಸ್, ಅರೆಸೈನಿಕ ಮತ್ತು ಮೀಸಲು ಪಡೆಗಳ ಸುಮಾರು 50,000 ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ರಾಷ್ಟ್ರ ರಾಜಧಾನಿಯಲ್ಲಿ ಸುಮಾರು 12 ಮೆಟ್ರೋ ನಿಲ್ದಾಣಗಳಲ್ಲಿ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ಪೂರ್ವಭಾವಿ ಕ್ರಮವಾಗಿ, ಜಲ ಫಿರಂಗಿ ವಾಹನಗಳೊಂದಿಗೆ ಗಾಜಿಪುರ ಗಡಿಯಲ್ಲಿ ಬ್ಯಾರಿಕೇಡ್​ ಹಾಕಲಾಗಿದೆ. ಮಿಂಟೋ ಸೇತುವೆ ಪ್ರದೇಶದಲ್ಲಿ ಬ್ಯಾರಿಕೇಡಿಂಗ್ ಕ್ರಮಗಳ ಜೊತೆಗೆ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

ABOUT THE AUTHOR

...view details