ಸೀಪ್ಲೇನ್ ಉದ್ಘಾಟಿಸಿ ಕೆವಾಡಿಯಾದಿಂದ ಸಬರಮತಿಗೆ ಪ್ರಯಾಣಿಸಿದ ಪಿಎಂ ಮೋದಿ - seaplane
ಗುಜರಾತ್: ಇಲ್ಲಿನ ನರ್ಮದಾ ಜಿಲ್ಲೆಯ ಕೆವಾಡಿಯಾದಲ್ಲಿ ದೇಶದ ಮೊಟ್ಟ ಮೊದಲ ಸೀಪ್ಲೇನ್ ಸೇವೆ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ, ಕೆವಾಡಿಯಾದಿಂದ ಸಬರಮತಿಗೆ ಅದೇ ವಿಮಾನದಲ್ಲಿ ಪ್ರಯಾಣಿಸಿದ್ದಾರೆ. 15 ಆಸನ ಹೊಂದಿರುವ ಸೀಪ್ಲೇನ್, ಕೆವಾಡಿಯಾದಲ್ಲಿರುವ ಸರ್ದಾರ್ ವಲ್ಲಭಭಾಯ್ ಪಟೇಲ್ ಏಕತಾ ಪ್ರತಿಮೆಯಿಂದ ಅಹಮದಾಬಾದ್ನ ಸಬರಮತಿವರೆಗೆ ಹಾರಾಟ ನಡೆಸಲಿದೆ. ನೀರು, ನೆಲದ ಮೇಲಿಂದ ಹಾರುವ ಸಾಮರ್ಥ್ಯವುಳ್ಳ ವಿಮಾನ ಇದಾಗಿದ್ದು, ಒಬ್ಬ ಪ್ರಯಾಣಿಕನಿಗೆ ಒಂದು ಕಡೆಯ ಪ್ರಯಾಣಕ್ಕೆ 1,500 ರೂ. ಟಿಕೆಟ್ ದರ ನಿಗದಿಯಾಗಿದೆ.