ಲಾಕ್‌ಡೌನ್ ಭಾಗ 2.0: 21 ನಿಮಿಷಗಳ ಮೋದಿ ಭಾಷಣವನ್ನು ಇಲ್ಲಿ ವೀಕ್ಷಿಸಿ - ಹೋಮ್ ಮೇಡ್ ಮಾಸ್ಕ್
ದೇಶದಲ್ಲಿ ಮೇ.3ರವರೆಗೆ ಎರಡನೇ ಹಂತದ ಕೊರೊನಾ ಲಾಕ್‌ಡೌನ್ ಮುಂದುವರಿಯಲಿದೆ. ಇಂದಿನ ಭಾಷಣದಲ್ಲಿ ಪ್ರಧಾನಿ ಮೋದಿ ಅನೇಕ ವಿಚಾರಗಳ ಬಗ್ಗೆ ಮಾತನಾಡಿದ್ದಾರೆ. 21 ನಿಮಿಷಗಳ ಭಾಷಣವನ್ನು ಇಲ್ಲಿದೆ ನೋಡಿ. ಮುಖ್ಯಾಂಶಗಳು: - ನಿಮ್ಮ ಸಹಕಾರದಿಂದ ದೇಶದಲ್ಲಿ ಕೊರೊನಾ ಸ್ವಲ್ಪಮಟ್ಟಿಗೆ ನಿಯಂತ್ರಣವಾಗಿದೆ. - ದೇಶದಲ್ಲಿ 550ರಷ್ಟು ಸೋಂಕು ಕಂಡು ಬಂದಾಗಲೇ ಲಾಕ್‌ಡೌನ್ ಹೇರಿಕೆ ಮಾಡಲಾಗಿತ್ತು. - ಪ್ರಪಂಚದ ಬೇರೆ ದೇಶಗಳಿಗೆ ಹೋಲಸಿದರೆ ದೇಶದ ಸ್ಥಿತಿ ಉತ್ತಮವಾಗಿದೆ. - ಏಪ್ರಿಲ್ 20ರವರೆಗೆ ದೇಶದಲ್ಲಿ ಲಾಕ್‌ಡೌನ್ ನಿರ್ಬಂಧ ಕಠಿಣವಾಗಿರಲಿದೆ. - ಕೊರೊನಾ ಹಾಟ್ಸ್ಪಾಟ್ಗಳಲ್ಲಿ ಕಟ್ಟುನಿಟ್ಟಿನ ಕ್ರಮ - ವಿನಾಯಿತಿ ಇದ್ದರೂ ಸರ್ಕಾರದ ಆದೇಶಗಳನ್ನು ಪಾಲಿಸುವುದು ಅನಿವಾರ್ಯ - ಕೊರೊನಾ ವೈರಸ್ ಕಡಿಮೆ ಇರುವ ಪ್ರದೇಶಗಳಲ್ಲಿ ಏಪ್ರಿಲ್ 20ರ ಬಳಿಕ ಲಾಕ್‌ಡೌನ್ ನಿರ್ಬಂಧ ಸಡಿಲ - ಮುಂದಿನ ಲಾಕ್‌ಡೌನ್ ಬಗ್ಗೆ ನಾಳೆ ಹೊಸ ಮಾರ್ಗಸೂಚಿ ಬಿಡುಗಡೆ - ದಿನಗೂಲಿ ನೌಕರರು, ರೈತರಿಗೆ ಆದ್ಯತೆ - ಹೊಸ ಪ್ರದೇಶಗಳಿಗೆ ಕೊರೊನಾ ಹರಡದಂತೆ ಕ್ರಮ - ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಿ, ಆಯುಷ್ ಮಾರ್ಗಸೂಚಿಗಳನ್ನು ಪಾಲಿಸಿ - ದೇಶಾದ್ಯಂತ 600ಕ್ಕೂ ಹೆಚ್ಚು ಆಸ್ಪತ್ರೆಗಳನ್ನು ಕೊರೊನಾ ಚಿಕಿತ್ಸೆಗಾಗಿ ಮೀಸಲಿಟ್ಟಿದ್ದೇವೆ. - ಚಿಕಿತ್ಸೆಗೆ ಲಕ್ಷಕ್ಕೂ ಹೆಚ್ಚು ಬೆಡ್‌ಗಳಿವೆ.