2 ದಿನದ ಬಾಂಗ್ಲಾ ಪ್ರವಾಸ ಮುಗಿಸಿ ದೆಹಲಿಗೆ ಬಂದಿಳಿದ ಪ್ರಧಾನಿ ಮೋದಿ - ಬಾಂಗ್ಲಾದೇಶದ 50 ನೇ ಸ್ವಾತಂತ್ರ್ಯ ದಿನಾಚರಣೆ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಮಾರ್ಚ್ 27ರ ರಾತ್ರಿ ತಮ್ಮ ಎರಡು ದಿನಗಳ ಬಾಂಗ್ಲಾದೇಶ ಭೇಟಿಯನ್ನು ಮುಕ್ತಾಯಗೊಳಿಸಿ, ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ಪ್ರಧಾನಿ ಮೋದಿ ಬಾಂಗ್ಲಾದೇಶದ 50 ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಪಾಲ್ಗೊಂಡಿದ್ದರು. ತಮ್ಮ ಭೇಟಿಯ ವೇಳೆ ಪ್ರಧಾನಿ ಮೋದಿ ಅವರು ಬಾಂಗ್ಲಾದೇಶ ಅಧ್ಯಕ್ಷ ಅಬ್ದುಲ್ ಹಮೀದ್ ಅವರನ್ನು ಭೇಟಿ ಮಾಡಿದ್ದರು. ಕೊರೊನಾ ಸಾಂಕ್ರಾಮಿಕ ರೋಗ ಜಗತ್ತಿನೆಲ್ಲೆಡೆ ತಲ್ಲಣ ಮೂಡಿಸಿದ ನಂತರ ಇದು ಪ್ರಧಾನ ಮಂತ್ರಿಯ ಮೊದಲ ವಿದೇಶ ಪ್ರವಾಸವಾಗಿದೆ.