ಸ್ವಾಧೀನಪಡಿಸಿಕೊಂಡ ಭೂಮಿಗೆ ಸಿಗದ ಪರಿಹಾರ, ಆಕ್ರೋಶಗೊಂಡ ರೈತರು ಮಾಡಿದ್ದೇನು? - ಉನ್ನಾವೊ ರೈತರ ಪ್ರತಿಭಟನೆ ಸುದ್ದಿ
ಉನ್ನಾವೊ(ಉತ್ತರ ಪ್ರದೇಶ): ರಾಜ್ಯ ಕೈಗಾರಿಕಾ ಅಭಿವೃದ್ಧಿ ನಿಗಮದ ಟ್ರಾನ್ಸ್ ಗಂಗಾ ನಗರ ಯೋಜನೆಗಾಗಿ ಸ್ವಾಧೀನಪಡಿಸಿಕೊಂಡಿರುವ ಜಮೀನುಗಳಿಗೆ ಸರಿಯಾಗಿ ಪರಿಹಾರ ನೀಡಿಲ್ಲ ಎಂದು ಆರೋಪಿಸಿ ರೈತರ ಪ್ರತಿಭಟನೆ ಉಗ್ರ ಸ್ವರೂಪ ಪಡೆದಿದೆ. ನಿನ್ನೆ ಇದಕ್ಕೆ ವಿರೋಧ ವ್ಯಕ್ತಪಡಿಸಿ ರೈತರು ಪ್ರತಿಭಟನೆ ನಡೆಸಿದ್ದರು. ಇಂದು ಆಕ್ರೋಶಗೊಂಡ ರೈತರು ಉನ್ನಾವೊದ ವಿದ್ಯುತ್ ಉಪಕೇಂದ್ರದ ಮುಂದೆ ಇರಿಸಲಾಗಿರುವ ಪ್ಲಾಸ್ಟಿಕ್ ಪೈಪ್ಗಳಿಗೆ ಬೆಂಕಿ ಹಚ್ಚಿದ್ದಾರೆ ಎಂದು ಹೇಳಲಾಗಿದೆ. ಪರಿಣಾಮ ಸ್ಥಳದಲ್ಲಿ ಇರಿಸಲಾಗಿದ್ದ ಪ್ಲಾಸ್ಟಿಕ್ ಪೈಪ್ ಹೊತ್ತಿ ಉರಿದಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸುವ ಪ್ರಯತ್ನ ಮಾಡಿದ್ದಾರೆ.