ಚಳಿಗಾಲದ ಬಳಿಕ ತೈಲ ಬೆಲೆಯಲ್ಲಿ ಇಳಿಕೆಯಂತೆ: ಧರ್ಮೇಂದ್ರ ಪ್ರಧಾನ್! - ತೈಲ ಬೆಲೆ ಬಗ್ಗೆ ಕೇಂದ್ರ ಪೆಟ್ರೋಲಿಂ ಸಚಿವರ ಮಾತು
ನವದೆಹಲಿ: ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪೆಟ್ರೋಲಿಯಂ ಬೆಲೆಯಲ್ಲಿ ಹೆಚ್ಚಳವಾಗಿದ್ದು, ಇದು ಗ್ರಾಹಕರ ಮೇಲೂ ಪರಿಣಾಮ ಬೀರಿದೆ ಎಂದಿರುವ ಕೇಂದ್ರ ಪೆಟ್ರೋಲಿಂ ಸಚಿವ ಧರ್ಮೇಂದ್ರ ಪ್ರಧಾನ್, ಚಳಿಗಾಲ ಮುಕ್ತಾಯದ ಬಳಿಕ ಬೆಲೆಗಳು ಸ್ವಲ್ಪ ಕಡಿಮೆಯಾಗಲಿವೆ ಎಂದಿದ್ದಾರೆ. ತೈಲ ಬೆಲೆ ಏರಿಕೆ ಅಂತಾರಾಷ್ಟ್ರೀಯ ವಿಷಯವಾಗಿದ್ದು, ಬೇಡಿಕೆ ಹೆಚ್ಚಳವಾಗಿರುವ ಕಾರಣ ಬೆಲೆಯಲ್ಲೂ ಏರಿಕೆಯಾಗಿದೆ. ಚಳಿಗಾಲದ ಬಳಿಕ ಬೆಲೆ ಇಳಿಕೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ.