ಆಂಧ್ರದ 'ಪೆಸರಟ್ಟು': ಆರೋಗ್ಯಕರ ಉಪಹಾರದ ಆಯ್ಕೆ ನಿಮ್ಮದಾಗಿರಲಿ - ಆರೋಗ್ಯಕರ ಉಪಹಾರ
ಪೆಸರಟ್ಟು ಕೇವಲ ಸುಲಭವಾಗಿ ತಯಾರಿಸಬಲ್ಲ ದೋಸೆ ಮಾತ್ರವಲ್ಲ. ಪೌಷ್ಟಿಕ ಆಹಾರ ಕೂಡ ಹೌದು. ಹೆಸರು ಕಾಳು ಅಥವಾ ಹೆಸರು ಬೇಳೆ ಹಾಗೂ ಬ್ರೌನ್ ರೈಸ್ನಿಂದ ತಯಾರಿಸುವ ಪೆಸರಟ್ಟು, ದೇಹದ ನಿರ್ವಿಶೀಕರಣಕ್ಕೆ ಸಹಾಯ ಮಾಡುತ್ತದೆ. ಅಲ್ಲದೇ ದೀರ್ಘಕಾಲದ ಕಾಯಿಲೆಗಳಿಗೆ ಮದ್ದಾಗಿ ಕೆಲಸ ಮಾಡುತ್ತದೆ. ಆಂಧ್ರ ಪ್ರದೇಶದ ಪ್ರಸಿದ್ಧ ತಿನಿಸು ಪೆಸರಟ್ಟು ನಿಮ್ಮ ದಿನವನ್ನು ಪ್ರಾರಂಭಿಸಲು ಉತ್ತಮ ಆರೋಗ್ಯಕರ ಉಪಹಾರಗಳಲ್ಲಿ ಒಂದಾಗಿದೆ.